Ad Widget .

Health Tips| ಒಗ್ಗರಣೆ ರಾಜ ಕರಿಬೇವಿನ ಪ್ರಯೋಜನಗಳೇನು ಗೊತ್ತಾ?

ಸಮಗ್ರ ನ್ಯೂಸ್: ಕರಿಬೇವಿನ ಎಲೆಯು ವಾಸ್ತವವಾಗಿ ಕರಿಬೇವಿನ ಸೊಪ್ಪಿನ ವಾಸನೆ ಬಹಳ ಚೆನ್ನಾರುತ್ತದೆ. ಇದರಿಂದ ತಯಾರಿಸುವ ದಾಲ್ ಮತ್ತು ಸಾಂಬಾರ್ ರುಚಿ ಉತ್ತಮವಾಗಿರುತ್ತದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಸಾಮಾನ್ಯವಾಗಿ ಕರಿಬೇವಿನ ಎಲೆಯನ್ನು ಅಡುಗೆಗೆ ಬಳಸುತ್ತಾರೆ. ಒಗ್ಗರಣೆ ರಾಜ ಕರಿಬೇವು, ಆರೋಗ್ಯಕ್ಕೆ ಹಲವಾರು ರೀತಿಯ ಪ್ರಯೋಜನಗಳನ್ನು ನೀಡುತ್ತವೆ.

Ad Widget . Ad Widget . Ad Widget .

ದೈನಂದಿನ ಭಕ್ಷ್ಯಗಳಲ್ಲಿ ಕರಿಬೇವಿನ ಎಲೆಗಳನ್ನು ಬಳಸುವುದರಿಂದ ಹೃದಯ ಕಾಯಿಲೆಯಿಂದ ಹಿಡಿದು, ಡೆಂಗ್ಯೂ, ಅಜೀರ್ಣವನ್ನು ತೆಗೆದು ಹಾಕಲು ಮತ್ತು ಚಯಾಪಚಯ ದರವನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ. ಇದು ವಿಟಮಿನ್ ಸಿ (Vitamin-C) ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಅಲ್ಲದೇ ಇದು ಹೃದಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಕರಿಬೇವಿನ ಎಲೆಗಳನ್ನು ನಿಯಮಿತವಾಗಿ ತಿನ್ನುವುದರಿಂದ ಹೃದ್ರೋಗವನ್ನು ತಡೆಯಬಹುದು.

ಕರಿಬೇವು ಕೂದಲು ಉದುರುವಿಕೆಯನ್ನು ನಿವಾರಿಸುತ್ತದೆ. ಇದು ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ. ವಿಟಮಿನ್ ಎ ಮತ್ತು ಸಿ ಕೂದಲನ್ನು ಬಲಪಡಿಸುತ್ತದೆ ಮತ್ತು ಕೂದಲನ್ನು ಆರೋಗ್ಯವಾಗಿಡುತ್ತದೆ. ಅಷ್ಟೇ ಅಲ್ಲ, ಕರಿಬೇವಿನ ಎಲೆಗಳು ತ್ವಚೆಯ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆ ಜಗಿಯುವುದರಿಂದ ಸುಲಭವಾಗಿ ಜೀರ್ಣವಾಗುತ್ತದೆ. ಮಲಬದ್ಧತೆ, ಆಮ್ಲೀಯತೆ, ಹೊಟ್ಟೆಯ ಸಮಸ್ಯೆ ಎಲ್ಲಾ ಸಮಸ್ಯೆಗಳು ನಿವಾರಣೆ ಆಗುತ್ತದೆ. ಪ್ರತಿದಿನ ಕರಿಬೇವಿನ ಎಲೆಗಳು ಇನ್ಸುಲಿನ್ ಕಾರ್ಯವನ್ನು ಹೆಚ್ಚಿಸಲು ಪ್ರಾರಂಭಿಸುತ್ತವೆ. ಪರಿಣಾಮವಾಗಿ, ರಕ್ತದಲ್ಲಿನ ಸಕ್ಕರೆ ಪ್ರಮಾಣವು ಸಾಮಾನ್ಯ ಮಟ್ಟವನ್ನು ಮೀರುವುದಿಲ್ಲ. ಕರಿಬೇವಿನ ಎಲೆಗಳಲ್ಲಿರುವ ನಾರಿನಾಂಶವು ರಕ್ತದ ಸಕ್ಕರೆಯ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

(-ಸಂಗ್ರಹ)

Leave a Comment

Your email address will not be published. Required fields are marked *