ಮಂಗಳೂರು ವಿಮಾನ ನಿಲ್ದಾಣ ಅ. 31ರಿಂದ ಅದಾನಿ ಗ್ರೂಪ್ ಆಡಳಿತಕ್ಕೆ

ಸಮಗ್ರ ನ್ಯೂಸ್:ಮಂಗಳೂರು ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಂಪೂರ್ಣ ನಿರ್ವಹಣೆಯನ್ನು ಅ. 31ರಿಂದ ಅದಾನಿ ಗ್ರೂಪ್ ಸಂಸ್ಥೆಗೆ ಕಾರ್ಯಾಚರಣೆ ಗುತ್ತಿಗೆ ಜವಾಬ್ದಾರಿ ಹೊತ್ತುಕೊಳ್ಳಲಿದೆ.

Ad Widget ... ..

ಮೂರು ವರ್ಷಗಳ ಹಿಂದೆ ಈ ಗುತ್ತಿಗೆ ಅದಾನಿ ಗ್ರೂಪ್ ಪಾಲಾಗಿತ್ತು. ಅಕ್ಟೋಬರ್ 31, 2020 ರಂದು, ಅದಾನಿ ಗ್ರೂಪ್ ದೇಶದ ಆರು ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ವಹಿಸಿಕೊಂಡಿತ್ತು. ವಿಮಾನ ನಿಲ್ದಾಣಗಳ ಅಭಿವೃದ್ಧಿ ನಿಟ್ಟಿನಲ್ಲಿ ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರದ ನಿರ್ಧಾರವಾಗಿತ್ತು.

Ad Widget

ಅದಾನಿ ಗ್ರೂಪ್ ಮೊದಲು ನಗರದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತೆಗೆದುಕೊಂಡಿತು. ನಂತರ ಅದು ಅಹಮದಾಬಾದ್, ಲಕ್ನೋ, ಜೈಪುರ, ಗುವಾಹಟಿ ಮತ್ತು ತಿರುವನಂತಪುರದ ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಸಹ ತನ್ನ ಸುಪರ್ದಿಗೆ ಪಡೆದುಕೊಂಡಿತ್ತು.

ಒಪ್ಪಂದದ ಪ್ರಕಾರ, ಮೂರು ವರ್ಷಗಳವರೆಗೆ, ಎಎಐಗೆ ಸೇರಿದ ಅರ್ಧದಷ್ಟು ಸಿಬ್ಬಂದಿ ಅದಾನಿ ಸಮೂಹದ ಸಿಬ್ಬಂದಿಯೊಂದಿಗೆ ಕೆಲಸ ಮಾಡಬೇಕಾಗಿತ್ತು. ಇದೀಗ ವಿಮಾನ ನಿಲ್ದಾಣದ ಸಂಪೂರ್ಣ ನಿರ್ವಹಣೆ ಅದಾನಿ ಕೈ ಸೇರುತ್ತಿದೆ. ಅದಾನಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವಹಿಸಿಕೊಂಡಾಗ ಎಎಐನಲ್ಲಿ 118 ಸಿಬ್ಬಂದಿ ಇದ್ದರು. ಈ ಪೈಕಿ 97 ಮಂದಿಯನ್ನು ಉಳಿಸಿಕೊಳ್ಳಲಾಗಿದೆ. ಎಲ್ಲರೂ ಎಜಿಎಂ ಮಟ್ಟ ಮತ್ತು ಅದಕ್ಕಿಂತ ಕೆಳಗಿನವರಾಗಿದ್ದು, ಅವರು ಹಣಕಾಸು, ಮಾನವ ಸಂಪನ್ಮೂಲ, ಆಡಳಿತ, ವಾಣಿಜ್ಯ, ಅಗ್ನಿಶಾಮಕ ಸೇವೆ ಮತ್ತು ಟರ್ಮಿನಲ್ ಅನ್ನು ನೋಡಿಕೊಳ್ಳುವ ಅದಾನಿ ಸಿಬ್ಬಂದಿಯೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ.

ಅ. 31ರಂದು ಒಪ್ಪಂದ ಮುಗಿಯುತ್ತಿದ್ದಂತೆ, 97 ಎಎಐ ಸಿಬ್ಬಂದಿಯನ್ನು ಇತರ ವಿಮಾನ ನಿಲ್ದಾಣಗಳಿಗೆ ವರ್ಗಾಯಿಸಲಾಗುತ್ತಿದೆ. ಏರ್ ಟ್ರಾಫಿಕ್ ಕಂಟ್ರೋಲ್ ಮತ್ತು ಸಂವಹನ ನ್ಯಾವಿಗೇಷನ್ ಮತ್ತು ಕಣ್ಗಾವಲು ಮಾತ್ರ ಅದಾನಿ ನಿಯಂತ್ರಣಕ್ಕೆ ಬರುವುದಿಲ್ಲ. ವಿಮಾನ ನಿಲ್ದಾಣದ ಹೆಸರನ್ನು ಬದಲಾಯಿಸಲಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

Leave a Comment

Your email address will not be published. Required fields are marked *