ಮಲೆನಾಡು ಟ್ರಸ್ಟ್ ವತಿಯಿಂದ ಉಮ್ಲಿಂಗ್ಲಾ ಏರಿದ ತವ್ಹೀದ್ ರಹ್ಮಾನ್ ದಂಪತಿಗೆ ಸನ್ಮಾನ

ಸಮಗ್ರ ನ್ಯೂಸ್:;ಸುಳ್ಯದಿಂದ ಪ್ರಥಮ ಬಾರಿಗೆ ಪ್ರಪಂಚದ ಅತ್ಯಂತ ಸುಂದರ ಸ್ಥಳಗಳಲ್ಲೊಂದಾದ ಜಮ್ಮು ಕಾಶ್ಮೀರದ ಲಡಾಖ್ ಗೆ ಬೈಕಿನಲ್ಲಿ ತೆರಳಿದ ಸುಳ್ಯದ ಯುವ ಉದ್ಯಮಿ ತೌಹೀದ್ ರಹ್ಮಾನ್ ಮತ್ತು ಪತ್ನಿ ಜಸ್ಮಿಯ ಹಾಗೂ 3 ವರ್ಷ ಪ್ರಾಯದ ಪುತ್ರ ಜಸೀಲ್ ರಹ್ಮಾನ್ ನೊಂದಿಗೆ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ [17498] ಗಿಂತ ಎತ್ತರದ ವಿಶ್ವದ ಅತೀ ಎತ್ತರದ ಮೋಟಾರ್ ಪಾಸ್ [19024] ಅಡಿ ಎತ್ತರದ ಮೈಟಿ ಉಮ್ಮಿಂಗ್ಲಾ ಪಾಸ್ ಅನ್ನು ತಲುಪಿದ್ದಾರೆ. ಇಲ್ಲಿ ಜಸೀಲ್ ರಹ್ಮಾನ್ ಆಮ್ಲಜನಕ ಮಟ್ಟವು 50 ಆಗಿರುವಲ್ಲಿ ಅತ್ಯಧಿಕ ಮೊಟಾರ್ ಎತ್ತರವನ್ನು ತಲುಪಿದ ಅತ್ಯಂತ ಕಿರಿಯ ಮಗು ಎಂಬ ರೆಕಾರ್ಡ್ ಮಾಡಿದ್ದಾನೆ.

Ad Widget ... ..

ಇವರ ಸಾಧನೆಯನ್ನು ಗುರುತಿಸಿ ಸುಳ್ಯದ ಮಲೆನಾಡು ಚಾರಿಟೇಬಲ್ ಟ್ರಸ್ಟ್ [ರಿ] ಇದರ ವತಿಯಿಂದ ಅವರ ನಿವಾಸಕ್ಕೆ ತೆರಳಿ ಅಭಿನಂದನೆ ಸಲ್ಲಿಸಿ ಶಾಲು, ಹಾರ ಹಾಕಿ ಸನ್ಮಾನ ಮಾಡಲಾಯಿತು. ಈ ಕಾರ್ಯಕ್ರಮವನ್ನು ಸುಳ್ಯ ನಗರ ಪಂಚಾಯತ್ ಮಾಜಿ ಅದ್ಯಕ್ಷರು ಕೆ.ಪಿ.ಸಿ.ಸಿ ಸಂಯೋಜಕರಾದ ಯಸ್.ಸಂಶುದ್ದೀನ್, ಮಲೆನಾಡು ಟ್ರಸ್ಟ್ ಇದರ ಗೌರವಾದ್ಯಕ್ಷರಾದ ಉದ್ಯಮಿ ರೋ|ಅಬ್ದುಲ್ ಹಮೀದ್ ಜನತಾ ನೆರವೇರಿಸಿ ಶುಭ ಹಾರೈಸಿದರು.

Ad Widget

ಈ ಸಂದರ್ಭದಲ್ಲಿ ಮಲೆನಾಡು ಟ್ರಸ್ಟ್ ಇದರ ಅಧ್ಯಕ್ಷರು, ನ.ಪಂ ಸದಸ್ಯ ರಿಯಾಝ್ ಕಟ್ಟೆಕ್ಕಾರ್ , ನ.ಪಂ ಸದಸ್ಯ ಶರೀಫ್ ಕಂಠಿ, ಉದ್ಯಮಿ ಸಿದ್ದೀಕ್ ಕೊಕ್ಕೊ, ಮನ್ಸೂರ್ ಮೆಟ್ರೊ, ತೌಹೀದ್ ರಹ್ಮಾನ್ ಪೋಷಕರಾದ ಹವೀದ್ ಕುರುಂಜಿ ದಂಪತಿಗಳು ಉಪಸ್ಥಿತರಿದ್ದರು . ಪತ್ರಕರ್ತೆ ಶಾಹಿನ ಸುಳ್ಯ ಸ್ವಾಗತಿಸಿ, ಜಸ್ಮಿಯ ರವರನ್ನು ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿದರು. ಕಾರ್ಯಕ್ರಮವನ್ನು ಕೆ.ಬಿ.ಇಬ್ರಾಹಿಂ ನಿರೂಪಿಸಿ, ವಂದಿಸಿದರು, ಫರ್ಝೀನಾ ಸುಳ್ಯ ಸಹಕರಿಸಿದರು.

Leave a Comment

Your email address will not be published. Required fields are marked *