Ad Widget .

ಧರ್ಮಸ್ಥಳದ ಅಣ್ಣಪ್ಪ ಸನ್ನಿಧಿ ಎದುರು ನಡೆದದ್ದು ಪ್ರಮಾಣವೇ?| ನಿಜಕ್ಕೂ ಅಲ್ಲಿ ನಡೆದದ್ದೇನು?

ಸಮಗ್ರ ನ್ಯೂಸ್: ಧರ್ಮಸ್ಥಳದ ಮಣ್ಣಸಂಕ‌ ಬಳಿ ನಡೆದ ಸೌಜನ್ಯ ಅತ್ಯಾ‌ಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಜನ್ಯ ತಾಯಿ ಕುಸುಮಾವತಿ ಹೆಸರಿಸಿದ್ದ ಧೀರಜ್ ಕೆಲ್ಲ, ಉದಯ್ ಜೈನ್, ಮಲಿಕ್ ಜೈನ್ ಅಣ್ಣಪ್ಪ ಬೆಟ್ಟದಲ್ಲಿ ಪ್ರಾರ್ಥನೆ ಮಾಡಿದ್ದು ಇದರ ಬಗ್ಗೆ ಇದೀಗ ಜಿಜ್ಞಾಸೆ ಮೂಡಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಇಂದು(ಆ.26) ವಿಹಿಂಪ ಹಾಗೂ ಭಜರಂಗದಳದ ನೇತೃತ್ವದಲ್ಲಿ ನೇತ್ರಾವತಿಯಿಂದ ಅಣ್ಣಪ್ಪ‌ ಬೆಟ್ಟಕ್ಕೆ ಪಾದಯಾತ್ರೆ ನಡೆದಿತ್ತು. ಈ ಪಾದಯಾತ್ರೆಯಲ್ಲಿ ಸೌಜನ್ಯ ತಾಯಿ ಕುಸುಮಾವತಿ ಕೂಡಾ ಭಾಗವಹಿಸಿದ್ದರು. ಪಾದಯಾತ್ರೆಯಲ್ಲಿ ಅಣ್ಣಪ್ಪ ಬೆಟ್ಟಕ್ಕೆ ತೆರಳಿದ ಪ್ರತಿಭಟನಾಕಾರರ ಎದುರು ಧೀರಜ್ ಕೆಲ್ಲ, ಮಲಿಕ್ ಜೈನ್, ಉದಯ್ ಜೈನ್ ಅಣ್ಣಪ್ಪ‌ನಿಗೆ ಕಾಣಿಕೆ ಹಾಕಿ ಪ್ರಾರ್ಥನೆ ನಡೆಸಿದ್ದಾರೆ.

Ad Widget . Ad Widget . Ad Widget .

ಪ್ರಾರ್ಥನೆಯಲ್ಲಿ ಮೂವರೂ, ಧರ್ಮಸ್ಥಳದಲ್ಲಿ ಒಂದು ದುರ್ಮರಣ ನಡೆದಿದ್ದು ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಆದರೆ ಇದು ಪ್ರಾರ್ಥನೆಯೋ? ಆಣೆಯೋ? ಎಂಬುದು‌ ಚರ್ಚೆಯ ವಿಷಯವಾಗಿದೆ.

ಇನ್ನೊಂದು ಗಮನಿಸಬೇಕಾದ ವಿಚಾರವೆಂದರೆ, ಇವರು ಹೇಳಿರುವ ಪ್ರಕಾರ ‘ಧರ್ಮಸ್ಥಳದಲ್ಲಿ ಒಂದು ದುರ್ಮರಣ ನಡೆದಿದೆ’ ಎಂದು ಹೇಳಿದ್ದು ಯಾರ ದುರ್ಮರಣ ಎಂಬುದನ್ನು ಹೇಳಲಿಲ್ಲ. ಹಾಗಾಗಿ ಹಲವಾರು ಸಾವುಗಳ ಪೈಕಿ ಸೌಜನ್ಯನ ಕೊಲೆಯೇ ಎಂಬುದನ್ನು ಸ್ಪಷ್ಟಪಡಿಸಬೇಕಿತ್ತು ಎಂಬುದು ಕೆಲವರು ವಾದ.

ಹೀಗಾಗಿ ಇದು ಪ್ರಾರ್ಥನೆಯೋ? ಆಣೆಯೋ? ಪ್ರಮಾಣವೋ? ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.

Leave a Comment

Your email address will not be published. Required fields are marked *