ಚಂದ್ರಯಾನ -3| ಲ್ಯಾಂಡರ್ ಇಳಿದ ಜಾಗಕ್ಕೆ ನಾಮಕರಣ ಮಾಡಿದ ಪ್ರಧಾನಿ ಮೋದಿ| ಏನದು ಹೊಸ ಹೆಸರು

ಸಮಗ್ರ ನ್ಯೂಸ್: ಚಂದ್ರಯಾನ -3 ರ ಚಂದ್ರನ ಲ್ಯಾಂಡರ್ ಇಳಿದ ಸ್ಥಳವನ್ನು ‘ಶಿವಶಕ್ತಿ’ ಎಂದು ಚಂದ್ರಯಾನ-2 ಪತನಗೊಂಡ ಸ್ಥಳಕ್ಕೆ ತಿರಂಗಾ ಎಂಬುದಾಗಿ ನಾಮಕರಣ ಮಾಡಲಾಗುತ್ತದೆ ಎಂದು ಪ್ರಧಾನಿ ಮೋದಿ ಘೋಷಿಸಿದರು.

Ad Widget ... ..

ಇಂದು ಬೆಂಗಳೂರಿನ ಇಸ್ರೋ ಕಮಾಂಡಿಂಗ್ ಸೆಂಟರ್ ನಲ್ಲಿ ವಿಜ್ಞಾನಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ಚಂದ್ರಯಾನ 3 ರ ವಿಕ್ರಮ್ ಲ್ಯಾಂಡರ್ನ ಟಚ್ಡೌನ್ ಪಾಯಿಂಟ್ ಅನ್ನು ‘ಶಿವ ಶಕ್ತಿ’ ಎಂದು ಕರೆಯಲಾಗುವುದು ಎಂದು ಪ್ರಧಾನಿ ಮೋದಿ ಎಂದು ಘೋಷಿಸಿದ್ದಾರೆ.

Ad Widget

ಬೆಂಗಳೂರಿನ ಇಸ್ರೋ ಕಮಾಂಡ್ ಸೆಂಟರ್ ನಲ್ಲಿ ವಿಜ್ಞಾನಿಗಳನ್ನುದ್ದೇಶಿಸಿ ಪ್ರಧಾನಿ ಭಾಷಣ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಅವರು ಇಂದು ಬೆಂಗಳೂರು ವಿಮಾನ ನಿಲ್ದಾಣದ ಹೊರಗೆ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು ಮತ್ತು ಇಸ್ರೋ ವಿಜ್ಞಾನಿಗಳ ಭವ್ಯ ಸಾಧನೆಯನ್ನು ಶ್ಲಾಘಿಸಿದರು.

ಚಂದ್ರಯಾನ 2 ಚಂದ್ರನ ಮೇಲೆ ಇಳಿದ ಸ್ಥಳಕ್ಕೆ ತಿರಂಗಾ ಎಂದು ಹೆಸರಿಡಲಾಗಿದೆ ಎಂದು ಪ್ರಧಾನಿ ಮೋದಿ ಶನಿವಾರ ಪ್ರಕಟಿಸಿದರು. ಬೆಂಗಳೂರಿನಲ್ಲಿ ಇಸ್ರೋ ವಿಜ್ಞಾನಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ.

ಚಂದ್ರಯಾನ 3 ರ ಯಶಸ್ಸಿನಿಂದಾಗಿ ದೇಶೀಯ ಉತ್ಪಾದನೆಗೆ ಉತ್ತೇಜನ ನೀಡಿರುವುದನ್ನು ಉಲ್ಲೇಖಿಸಿ ವಿಜ್ಞಾನಿಗಳು ಮೇಕ್ ಇನ್ ಇಂಡಿಯಾ ಉಪಕ್ರಮವನ್ನು ಚಂದ್ರನತ್ತ ಕೊಂಡೊಯ್ದಿದ್ದಾರೆ ಎಂದು ಅವರು ಹೇಳಿದರು.

Leave a Comment

Your email address will not be published. Required fields are marked *