ಬೆಂಗಳೂರಿನಲ್ಲಿ ಕಾಣಿಸಿಕೊಂಡ ಸ್ವರ್ಗದ ಬಾಗಿಲು!!

ಸಮಗ್ರ ನ್ಯೂಸ್: ಜಿಟಿ ಜಿಟಿ ಮಳೆ, ಮೋಡ ಕವಿದ ವಾತಾವರಣವಿದ್ದು, ನಿನ್ನೆ ರಾತ್ರಿ ಆಕಾಶದಲ್ಲಿ ಆಕರ್ಷಣೆ ನೆರಳು ಕಾಣಿಸಿಕೊಂಡಿದೆ. ಆಕಾಶದಲ್ಲಿ ಕಾಣಿಸಿಕೊಂಡ ಆಕರ್ಷಣೆ ನೆರಳಿಗೆ ಸ್ವಗದ ಬಾಗಿಲಿನಂತೆ ಕಾಣಿಸುತ್ತಿದೆ ಎಂದು ವಿಡಿಯೋವನ್ನು ಟ್ವಿಟರ್​ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಆನೇಕರು ಇದು ಸ್ವರ್ಗದ ಬಾಗಿಲು ಎಂದು ಕಮೆಂಟ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಅಚ್ಚರಿ ಪಟ್ಟಿದ್ದಾರೆ.

Ad Widget ... ..

“ಬೆಂಗಳೂರಿನ ಹೆಬ್ಬಾಳ ಮೇಲ್ಸೇತುವೆ ಬಳಿ ನಿನ್ನೆ ರಾತ್ರಿ ಆಕಾಶದಲ್ಲಿ ನಿಗೂಢ ನೆರಳು ಕಾಣಿಸಿಕೊಂಡಿದೆ. ಬೇರೆ ಯಾರಾದರೂ ನೋಡಿದ್ದೀರಾ? ಇದು ಏನಾಗಿರಬಹುದು? ಕಟ್ಟಡದ ನೆರಳಾ? ಹಾಗಿದ್ದಲ್ಲಿ, ಇದರ ಹಿಂದಿನ ವಿಜ್ಞಾನ ಏನಿರಬಹುದು? ಎಂದು ಟ್ವಿಟರ್​ ಬಳಕೆದಾರರೊಬ್ಬರು ವೀಡಿಯೊಗೆ ಶೀರ್ಷಿಕೆ ನೀಡಿ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.

Ad Widget

ಈ ವಿಡಿಯೋ ಟ್ವಿಟರ್​ನಲ್ಲಿ ಚರ್ಚೆಗೆ ಕಾರಣವಾಗಿದ್ದು ಜನರು ಆಶ್ಚರ್ಯ ಪಡುವಂತೆ ಮಾಡಿದೆ. ಕೇವಲರು ಇದು ಯಾವುದೋ ಎತ್ತರದ ಕಟ್ಟಡದ ಲೈಟ್​ನ ನೆರಳಿರಬಹುದು ಎಂದು ಊಹಿಸಿದರೆ ಇನ್ನೂ ಕೆಲವರು ಇದನ್ನು ‘ಬ್ರೋಕನ್ ಸ್ಪೆಕ್ಟರ್’ ಎಂದು ಊಹಿಸಿದ್ದಾರೆ.

Leave a Comment

Your email address will not be published. Required fields are marked *