ಸಮಗ್ರ ನ್ಯೂಸ್: ಪುಣ್ಚತ್ತಾರು ವಿಷ್ಣುಪುರ ಕರಿಮಜಲು ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ನೂತನ ಆಡಳಿತ ಮಂಡಳಿ ರಚೆನೆಯು ಜೂನ್ 25ರಂದು ನಡೆಯಿತು.
ಡಾ. ದೇವಿ ಪ್ರಸಾದ್ ಕಾನತ್ತೂರು ಸಭಾಧ್ಯಕ್ಷತೆ ವಹಿಸಿ ಬ್ರಹ್ಮಕಲಶೋತ್ಸವದ ಲೆಕ್ಕ ಪತ್ರ ಮಂಡನೆ ಮಾಡಿದರು. ಮತ್ತು ದಿನೇಶ್ ಮಾಳ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಅಧ್ಯಕ್ಷರಾಗಿ ಡಾ.ದೇವಿಪ್ರಸಾದ್ ಕಾನತ್ತೂರ್, ಉಪಾಧ್ಯಕ್ಷರಾಗಿ ಶ್ರೀ ವೆಂಕಟರಮಣ ಆಚಾರ್ಯ ಹಾಗೂ ಶ್ರೀ ಶೇಷಪ್ಪ ಗೌಡ ಬೆದ್ರಂಗಳ, ಕಾರ್ಯದರ್ಶಿಯಾಗಿ ಶ್ರೀ ಮೋನಪ್ಪ ಬಂಡಾಜೆ, ಜೊತೆ ಕಾರ್ಯದರ್ಶಿಯಾಗಿ ಶ್ರೀ ಮಿಥುನ್ ಪೈಕ, ಸದಸ್ಯರಾಗಿ ಶ್ರೀ ಜನಾರ್ಧನ ಆಚಾರ್ಯ, ಶ್ರೀ ಕೃಷ್ಣ ಆಚಾರ್ಯ, ಶ್ರೀ ಸಂಜೀವ ರೈ ಪೈಕ, ಶ್ರೀ ಕುಮಾರ ಆಚಾರ್ಯ ದೋಲ್ಪಾಡಿ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶೇಷಪ್ಪ ಗೌಡ ಬೆದ್ರಂಗಳ, ವೆಂಕಟ್ರಮಣ ಆಚಾರ್ಯ, ಜನಾರ್ಧನ ಆಚಾರ್ಯ, ಕೃಷ್ಣ ಆಚಾರ್ಯ, ಬೀರ್ನೇಳು ದುರ್ಗಾಪರಮೇಶ್ವರಿ ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಶಾಂತ್ ಮುರುಳ್ಯ, ಪ್ರದೀಪ್ ಬೊಬ್ಬೇಕೆರಿ, ಕುಮಾರ್ ಆಚಾರ್ಯ ದೋಲ್ಪಾಡಿ ಉಪಸ್ಥಿತರಿದ್ದರು.
ಶೇಷಪ್ಪ ಗೌಡ ಬೆದ್ರಂಗಳ ಸ್ವಾಗತಿಸಿ, ಬಾಲಕೃಷ್ಣ ರೈ ಕಾಸ್ಟಡಿಗುತ್ತು ವಂದಿಸಿದರು.