ಬೆಳ್ತಂಗಡಿ: ಮಳೆಯಿಂದಾಗಿ ಚಾಲಕರ ಹತೋಟಿ ತಪ್ಪಿ ಸರಣಿ ವಾಹನ ಪಲ್ಟಿ

ಸಮಗ್ರನ್ಯೂಸ್: ಕೊಟ್ಟಿಗೆಹಾರ ಕಡೆಯಿಂದ ಉಜಿರೆಯತ್ತ ಸಂಚರಿಸುತ್ತಿದ್ದ ಟೆಂಪೋ ಟ್ರಾವೆಲರ್ ಮತ್ತು ತರಕಾರಿ ಸಾಗಾಟದ ವಾಹನ ಚಾರ್ಮಾಡಿ ಪೇಟೆಯಲ್ಲಿ ಪಲ್ಟಿಯಾದ ಘಟನೆ ಜೂ.10 ರಂದು ನಡೆದಿದೆ.

Ad Widget ... ..

ಮಧ್ಯಾಹ್ನದ ವೇಳೆಗೆ ಅಂಗಡಿಯೊಂದರ ಮುಂಭಾಗ ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ಟ್ರಾವೆಲರ್ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಟಿಟಿ ಅಂಗಡಿಯಿಂದ ಅನತಿ ದೂರದಲ್ಲಿ ಪಲ್ಟಿಯಾದ ಕಾರಣ ಹೆಚ್ಚಿನ ಅನಾಹುತ ಉಂಟಾಗುವುದು ತಪ್ಪಿದೆ. ಈ ಘಟನೆ ನಡೆದ ಕೊಂಚ ಹೊತ್ತಿನಲ್ಲಿ ಇಲ್ಲಿಂದ 100ಮೀ. ಮುಂಭಾಗದಲ್ಲಿ ತರಕಾರಿ ಸಾಗಾಟದ ವಾಹನ ರಸ್ತೆ ಬದಿಗೆ ಜಾರಿ ಚರಂಡಿಗೆ ಬಿದ್ದಿದೆ. ಎರಡು ಘಟನೆಗಳಲ್ಲಿ ಯಾರಿಗೂ ಹೆಚ್ಚಿನ ಗಾಯಗಳಿಲ್ಲ ಎಂದು ತಿಳಿದುಬಂದಿದೆ.

Ad Widget

ಘಾಟಿ ಪರಿಸರ ಸೇರಿದಂತೆ ಚಾರ್ಮಾಡಿ ಒಂದನೇ ತಿರುವಿನಿಂದ ಚಾರ್ಮಾಡಿ ಹಳ್ಳದವರೆಗಿನ 3 ಕಿ.ಮೀ ವ್ಯಾಪ್ತಿಯ ರಸ್ತೆ ಕಳೆದ ನಾಲ್ಕು ವರ್ಷಗಳ ಹಿಂದೆ ಅಭಿವೃದ್ಧಿಪಡಿಸಲಾಗಿದೆ. ಈ 3 ಕಿಮೀ. ವ್ಯಾಪ್ತಿಯಲ್ಲಿ ಹಾಕಲಾಗಿರುವ ಡಾಮರು ವಿಪರೀತ ನಯವಾಗಿದ್ದು ಮಳೆಯ ಸಮಯ ಇಲ್ಲಿ ವಾಹನಗಳು ಚಾಲಕರ ಹತೋಟಿಗೆ ಸಿಗದೇ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಸಾಕಷ್ಟು ಬಾರಿ ಮನವಿ ಮಾಡಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಮಳೆಗಾಲದಲ್ಲಿ ಅಪಘಾತಗಳು ನಿರಂತರ ನಡೆಯುತ್ತಿರುವುದಾಗಿ ದೂರಿದ್ದಾರೆ. ಇಂದೂ ಕೂಡ ಪರಿಸರದಲ್ಲಿ ಮಳೆ ಇದ್ದು ವಾಹನಗಳು ಉರುಳಿ ಬೀಳಲು ಕಾರಣವಾಗಿದೆ.

Leave a Comment

Your email address will not be published. Required fields are marked *