ಮಗಳನ್ನೇ ಬರ್ಬರವಾಗಿ ಹತ್ಯೆಗೈದ ತಂದೆ

ಸಮಗ್ರ ನ್ಯೂಸ್: ಕೇರಳದ ಆಲಪ್ಪುಳದಲ್ಲಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಖಿನ್ನತೆಗೆ ಜಾರಿದ್ದ ವ್ಯಕ್ತಿಯೊಬ್ಬರು ಮಗಳನ್ನೇ ಕೊಡಲಿಯಿಂದ ಕಡಿದು ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ‌.

. Ad Widget . Ad Widget . Ad Widget .

ಆರೋಪಿಯ ಪತ್ನಿಯು ನಾಲ್ಕು ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಿಂದಾಗಿ ಖಿನ್ನತೆಗೆ ಖಿನ್ನತೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆಲಪ್ಪುಳದ ಪುನ್ನಮೂಡು, ಮಾವೇಲಿಕ್ಕರ ಮೂಲದ ಶ್ರೀಮಹೇಶ್ ಎಂಬಾತ ತನ್ನ ಮಗಳು ನಕ್ಷತ್ರಾಳನ್ನು ಕೈ ಕೊಡಲಿಯಿಂದ ಕಡಿದು ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಅವರ ಮನೆಯಲ್ಲಿ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಘಟನೆ ನಡೆದಿದ್ದು. ನಕ್ಷತ್ರಳ ಕಿರುಚಾಟವನ್ನು ಕೇಳಿ ಮನೆಗೆ ಬಂದ ತಾಯಿಯ ಮೇಲೂ ಸಹ ಹಲ್ಲೆ ಮಡಿದ್ದಾರೆ ಎನ್ನಲಾಗಿದೆ. ಪಕ್ಕದ ಮನೆಯಲ್ಲಿ ಮಗಳೊಂದಿಗೆ ವಾಸವಿದ್ದ ಶ್ರೀಮಹೇಶ್ ಅವರ ತಾಯಿ ಸುನಂದಾ (62) ಅವರ ತಲೆ ಮತ್ತು ಕುತ್ತಿಗೆಗೆ ಗಾಯಗಳಾಗಿವೆ.

ಈ ಘೋರ ಕೃತ್ಯಕ್ಕೆ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ. ಶ್ರೀಮಹೇಶ್ ಅವರ ಪತ್ನಿ ನಾಲ್ಕು ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತ್ನಿಯ ಸಾವಿನ ನಂತರ ಖಿನ್ನತೆಗೆ ಒಳಗಾಗಿದ್ದ ಶ್ರೀಮಹೇಶ್ ಮನೋ-ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ.

Leave a Comment

Your email address will not be published. Required fields are marked *