ಮಹಿಳೆಯರಿಗೆ ಟಿಕೆಟ್ ಫ್ರೀ…ಪುರುಷರಿಗೆ 50% ರಿಸರ್ವೇಷನ್| ಯಾವ ಬಸ್ ಗಳಲ್ಲಿ ಉಚಿತ ಪ್ರಯಾಣ? ಇಲ್ಲಿದೆ ಫುಲ್ ಡೀಟೈಲ್ಸ್

ಸಮಗ್ರ ನ್ಯೂಸ್: ಕಾಂಗ್ರೆಸ್‌ ವಿಧಾನಸಭೆ ಚುನಾವಣೆಗೂ ಮುನ್ನ ವೇಳೆ ನೀಡಿದ್ದ ಐದೂ ಗ್ಯಾರಂಟಿ ಯೋಜನೆಗಳನ್ನೂ ಜಾರಿಗೆ ತರುವುದಾಗಿ ಹೇಳಿದೆ. ಶುಕ್ರವಾರ ಸುದ್ದಿ ಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ಎಲ್ಲಾ ಯೋಜನೆಗಳನ್ನು ವಿವಿಧ ದಿನಾಂಕಗಳಲ್ಲಿ ಆಗಸ್ಟ್​ 15ರೊಳಗೆ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.

Ad Widget ... ..

ಜೂನ್‌ 11ರಿಂದ ಮಹಿಳೆಯರಿಗೆ ಉಚಿತ ಬಸ್‌ ಸೇವೆ ಲಭ್ಯವಾಗಲಿದೆ. ರಾಜ್ಯದ ಎಲ್ಲಾ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಬಹುದಾಗಿದೆ. ರಾಜ್ಯದಲ್ಲಿ ಎಲ್ಲಿ ಬೇಕಾದರೂ ಮಹಿಳೆಯರು ಟಿಕೆಟ್ ಇಲ್ಲದೆ ಪ್ರಯಾಣಿಸಬಹುದಾಗಿದೆ.

Ad Widget

ಇನ್ನು ರಾಜ್ಯ ಸಾರಿಗೆ ಬಸ್‌ಗಳಲ್ಲಿ ಪುರುಷರಿಗೂ 50% ಸೀಟ್​ ರಿಸರ್ವೇಷನ್ ಘೋಷಿಸಿದೆ. ಫ್ರೀ ಬಸ್​ ಸೇವೆಗಳಿಂದ ಪುರುಷ ಪ್ರಯಾಣಿಕರಿಗೆ ತೊಂದರೆಯಾಗದಿರಲು ಈ ರಿಸರ್ವೇಷನ್​ ಘೋಷಿಸಿದೆ.

ಪುರುಷರಿಗೆ ಸೀಟ್​ಗಳನ್ನು ರಿಸರ್ವ್ ಮಾಡುವ ಮೂಲಕ ಇಷ್ಟುದಿನಗಳ ಕಾಲ ಮಹಿಳೆಯರು, ವಿಕಲಚೇತನರು ಮತ್ತು ಹಿರಿಯ ನಾಗರಿಕರಿಗೆ ಇದ್ದ ಸೌಲಭ್ಯ ಇನ್ನು ಮುಂದೆ ಪುರುಷರಿಗೂ ಸಿಗಲಿದೆ. ಈ ವಿಚಾರವನ್ನು ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಖಚಿತಪಡಿಸಿದ್ದಾರೆ.

ಜೂನ್‌ 11ರಿಂದ ಎಸಿ ಬಸ್‌, ರಾಜಹಂಸ, ಐರಾವತ ಸ್ಲೀಪರ್​ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಇಲ್ಲ. ಆದರೆ ಕೆಎಸ್​ಆರ್​ಟಿಸಿ , ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರು ಕಿಮೀ ಮಿತಿಯಿಲ್ಲದೆ ಉಚಿತವಾಗಿ ಪ್ರಯಾಣ ಮಾಡಬಹುದು ಎಂದು ಸಿದ್ದರಾಮಯ್ಯ ಸರ್ಕಾರ ಘೋಷಿಸಿದೆ.

ಎಲ್ಲಾ ಮಹಿಳೆಯರಿಗೆ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಸೇರಿ ಸಾರಿಗೆ ಸಂಸ್ಥೆಯ ಒಟ್ಟು 4 ವಲಯಗಳ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಪ್ರಸ್ತುತ ಈ ಯೋಜನೆಗೆ ಯಾವುದೇ ನಿರ್ಬಂಧವಿಲ್ಲ. ಆದರೆ ಮುಂದಿನ ದಿನಗಳಲ್ಲಿ ಈ ಯೋಜನೆಯಲ್ಲಿ ಒಂದಷ್ಟು ಬದಲಾವಣೆ ತರಬಹುದು ಎನ್ನಲಾಗುತ್ತಿದೆ. ಪ್ರಸ್ತುತಕ್ಕೆ ಕರ್ನಾಟಕದ ಮಹಿಳೆಯರಿಗೆ ಈ ಯೋಜನೆ ಅನ್ವಯವಾಗಲಿದ್ದು, ಕರ್ನಾಟಕ ರಾಜ್ಯದಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

ರಾಜ್ಯ ಸರ್ಕಾರ ಪ್ರಸ್ತುತ ಮಹಿಳೆಯರ ಪ್ರಯಾಣಕ್ಕೆ ಗುರುತಿನ ಚೀಟಿ, ಪಾಸ್​ ನೀಡಲಿದೆಯೇ ಎನ್ನುವುದರ ಬಗ್ಗೆ ಇನ್ನೂ ಸ್ಪಷ್ಟನೆ ನೀಡಿಲ್ಲ. ಆದರೂ ರಾಜ್ಯದ ಮಹಿಳೆ ಎನ್ನುವುದನ್ನು ಖಷಿತಪಡಿಸಿಕೊಳ್ಳುವುದಕ್ಕೆ ಬಹುಶಃ ಗುರುತಿಗಾಗಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಅಥವಾ ವೋಟರ್ ಐಡಿಗಳನ್ನು ತೋರಿಸುವುದನ್ನು ಕಡ್ಡಾಯ ಮಾಡಬಹುದು ಎನ್ನಲಾಗುತ್ತಿದೆ.

Leave a Comment

Your email address will not be published. Required fields are marked *