ಕಡಬ: ಪಿನಾಯಿಲ್ ಕುಡಿದು ಪತ್ರಕರ್ತ ಆತ್ಮಹತ್ಯೆಗೆ ಯತ್ನ!?

ಸಮಗ್ರ ನ್ಯೂಸ್: ಪಿನಾಯಿಲ್ ಕುಡಿದು ಪತ್ರಕರ್ತನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಿಂದ ವರದಿಯಾಗಿದೆ. ಆತ್ಮಹತ್ಯೆಗೆ ಯತ್ನಿಸಿದ‌ವರನ್ನು ವೆಬ್ ನ್ಯೂಸ್ ಒಂದರ ಸಂಪಾದಕ ಗಣೇಶ್ ಇಡಾಳ(28) ಎಂದು ಗುರುತಿಸಲಾಗಿದೆ.

. Ad Widget . Ad Widget . Ad Widget

ಈತ ಮೇ 30 ರಂದು ತನ್ನ ಮನೆಯಲ್ಲಿ ಶೌಚಾಲಯ ಶುಚಿಗೊಳಿಸುವ ಫಿನಾಯಿಲ್ ಎಂಬ ರಾಸಾಯನಿಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆಂದು ಹೇಳಲಾಗಿದೆ. ಮನೆಯಲ್ಲಿಯೇ ಫಿನಾಯಿಲ್ ಕುಡಿದು ಅಸ್ವಸ್ಥನಾಗಿ ಬಿದ್ದಿದ್ದ ಈತನನ್ನು ಕೂಡಲೇ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ನಂತರ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನಲೆಯಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

. Ad Widget .

Leave a Comment

Your email address will not be published. Required fields are marked *