ಸಿದ್ದರಾಮಯ್ಯ ಟೀಕಿಸಿ ಪ್ರವೀಣ್ ನೆಟ್ಟಾರು ಮಾಡಿದ್ದ ಟ್ವೀಟ್ ವೈರಲ್

ಸಮಗ್ರ ನ್ಯೂಸ್: ಪ್ರವೀಣ್ ನೆಟ್ಟಾರು ಅವರು 3 ವರ್ಷಗಳ ಹಿಂದೆ ಸಿದ್ದರಾಮಯ್ಯ ಅವರನ್ನು ಟೀಕಿಸಿ ಮಾಡಿದ್ದ ಟ್ವೀಟ್ ಇದೀಗ ವೈರಲ್ ಆಗಿದೆ.

Ad Widget ... ..

ಸಿದ್ದರಾಮಯ್ಯ ಅವರು 2020ರ ಅಕ್ಟೋಬರ್ 22ರಂದು ನಳಿನ್ ಕುಮಾರ್ ಕಟೀಲ್ ಅವರ ವಿರುದ್ಧ ಟ್ವೀಟ್ ಮಾಡಿದ್ದರು. ಮಂಗಳೂರಿನಲ್ಲಿ ಎಲ್ಲಿಯೋ ಬೀದಿ ಅಲೆಯುತ್ತಿದ್ದ ಈ ನಳಿನ್ ಕುಮಾರ್ ಕಟೀಲ್ ಎಂಬ ಪೋಕರಿಯನ್ನು ಯಾರೋ ತಮ್ಮ ‘ಸಂತೋಷ’ಕ್ಕಾಗಿ ತಂದು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದರು. ಇವರಿಗೆ ಕೊಟ್ಟಿರುವ ಕೆಲಸ ಪಕ್ಷ ಕಟ್ಟುವುದಲ್ಲ, ಬಿ.ಎಸ್. ಯಡಿಯೂರಪ್ಪನವರನ್ನು ಕೆಡವುದು, ಅದನ್ನೇ ಮಾಡುತ್ತಾ ಇದ್ದಾರೆ. ಅಂತ ಟ್ವಿಟ್‌ ಮಾಡಿದ್ದರು.

Ad Widget

ಅದಕ್ಕೆ ಪ್ರವೀಣ್‌ ನೆಟ್ಟಾರು, `ಹಂದಿಗೆ ಸ್ನಾನ ಮಾಡಿಸೋದು ಮತ್ತು ಈ ಸಿದ್ದರಾಮಯ್ಯ ಎಂಬ ಕ್ರೂರಿಗೆ ಬುದ್ಧಿ ಹೇಳೋದು ಎರಡೂ ಒಂದೇ…. ನಳಿನ್ ಕುಮಾರ್ ಕಟೀಲ್ ಅವರ ಬಗ್ಗೆ ಮಾತನಾಡುವ ಮೊದಲು ನಿನ್ನ ಯೋಗ್ಯತೆ ಏನು ಎಂದು ತಿಳ್ಕೊಳ್ಳೋ ಅಂಡೆಪಿರ್ಕಿ ಸಿದ್ದರಾಮ’ ಎಂದು ವ್ಯಂಗ್ಯವಾಡಿದ್ದರು. 3 ವರ್ಷಗಳ ಹಿಂದೆ ಮಾಡಿದ್ದ ಈ ಟ್ವೀಟ್ ಈಗ ವೈರಲ್ ಆಗಿದೆ.

Leave a Comment

Your email address will not be published. Required fields are marked *