ಸಮಗ್ರ ನ್ಯೂಸ್: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಹಿಂದುತ್ವಕ್ಕೆ ಸೋಲು ಬಂದ ಕಾರಣ ಪುತ್ತೂರು ಯುವ ಮೋರ್ಚಾ ಕಾರ್ಯದರ್ಶಿ ಸ್ಥಾನಕ್ಕೆ ಚಂದ್ರಹಾಸ ಈಶ್ವರಮಂಗಲ ರಾಜೀನಾಮೆ ನೀಡಿರುವ ಬಗ್ಗೆ ತಿಳಿದುಬಂದಿದೆ.
ಈ ಬಗ್ಗೆ ‘ಸಮಗ್ರ ಸಮಾಚಾರ’ಕ್ಕೆ ಮಾಹಿತಿ ನೀಡಿದ ಚಂದ್ರಹಾಸ ಈಶ್ವರಮಂಗಲ ಅವರು ಪುತ್ತೂರಿನಲ್ಲಿ ಹಾಗೂ ರಾಜ್ಯದಲ್ಲಿ ಕಾರ್ಯಕರ್ತರ ಕಡೆಗಣಿಸಿದ್ದರಿಂದ ಮನನೊಂದು ರಾಜೀನಾಮೆ ನೀಡುತ್ತಿದ್ದೇನೆ, ಪುತ್ತೂರಿನ ಎಲ್ಲಾ ವ್ಯವಸ್ಥೆ ಸರಿಯಾಗುವವರೆಗೆ ಸಂಘಟನೆಯವರನ್ನು ದೂರ ಮಾಡಿದ್ದನ್ನು ಸರಿ ಮಾಡುವವರೆಗೆ ನಾನು ಪಕ್ಷದ ಜವಾಬ್ದಾರಿಯಲ್ಲಿರಲು ಬಯಸುವುದಿಲ್ಲ. ಅದೇ ರೀತಿ ಆದಷ್ಟು ಬೇಗ ಗ್ರಾಮ ಪಂಚಾಯತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆಯನ್ನು ನೀಡುತ್ತೇನೆ ಮತ್ತು ಸ್ವತಂತ್ರವಾಗಿ ಮತ್ತೊಮ್ಮೆ ಸ್ಪರ್ಧಿಸುತ್ತೇನೆ ಎಂದು ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ.