ಹೆಸರು ಬದಲಾಯಿಸಿಕೊಂಡ ಆಲ್ ಇಂಡಿಯಾ ರೇಡಿಯೋ| ಇನ್ಮುಂದೆ ಎಲ್ಲೆಲ್ಲೂ‌ ‘ಆಕಾಶವಾಣಿ’

ಸಮಗ್ರ ನ್ಯೂಸ್: ಸರ್ಕಾರಿ ಸ್ವಾಮ್ಯದ ‘ಪ್ರಸಾರ ಭಾರತಿ’, ತನ್ನ ರೇಡಿಯೋ ವಾಹಿನಿಯಾದ ‘ಆಲ್‌ ಇಂಡಿಯಾ ರೇಡಿಯೋ’ (AIR) ಹೆಸರನ್ನು ಬದಲಿಸಿ ಈ ಹಿಂದಿನಂತೆ ‘ಆಕಾಶವಾಣಿ’ ಎಂದು ಮರು ನಾಮಕರಣ ಮಾಡಲು ನಿರ್ಧರಿಸಿದೆ. ಈ ಸಂಬಂಧ ಬುಧವಾರ ಆಕಾಶವಾಣಿ ಮಹಾನಿರ್ದೇಶಕಿ ವಸುಧಾ ಗುಪ್ತಾ ಆಂತರಿಕ ಆದೇಶ ಹೊರಡಿಸಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget .

ಅನೇಕ ‘ಆಲ್‌ ಇಂಡಿಯಾ ರೇಡಿಯೋ’ ಕೇಂದ್ರಗಳಲ್ಲಿ ಈಗಲೂ ಆಕಾಶವಾಣಿ ಎಂಬ ಫಲಕವೇ ಇದೆ. ಆದರೆ ಕೆಲವು ಕಡೆ ಬರೀ ‘ಆಲ್‌ ಇಂಡಿಯಾ ರೇಡಿಯೋ’ ಎಂದು ಮಾತ್ರ ನಮೂದಾಗಿದೆ. ಹೊಸ ಆದೇಶದಿಂದ ಆಲ್‌ ಇಂಡಿಯಾ ರೇಡಿಯೋದ ಎಲ್ಲ ದಾಖಲಾತಿಗಳಲ್ಲಿ ಇನ್ನು ಎಐಆರ್‌ ಬದಲು ‘ಆಕಾಶವಾಣಿ’ ಎಂದು ನಮೂದಾಗಲಿದೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಎಐಆರ್‌ಗೆ ‘ಆಕಾಶವಾಣಿ’ ಎಂದು ಖ್ಯಾತ ಕವಿ ರವೀಂದ್ರನಾಥ ಠಾಗೋರರು 1939ರಲ್ಲಿ ಕಲ್ಕತ್ತಾ ಶಾರ್ಟ್‌ವೇವ್‌ ರೇಡಿಯೋ ಕೇಂದ್ರದ ಉದ್ಘಾಟನೆ ವೇಳೆ ಸಂಬೋಧಿಸಿದ್ದರು. ಇದಕ್ಕೂ ಮುನ್ನ 1935ರ ಸೆ.10ರಂದು ‘ಆಕಾಶವಾಣಿ ಮೈಸೂರು’ ಎಂಬ ಖಾಸಗಿ ರೇಡಿಯೋ ಕೇಂದ್ರ ಆರಂಭವಾಗಿತ್ತು. ಆಗ ಅದಕ್ಕೆ ಹೆಸರು ಕೊಟ್ಟವರು ಕನ್ನಡಿಗ ಗೋಪಾಲಸ್ವಾಮಿ.

Leave a Comment

Your email address will not be published. Required fields are marked *