ಇಂದು(ಮೇ.5) ವರ್ಷದ ಮೊದಲ ಚಂದ್ರಗ್ರಹಣ| ಭಾರತದಲ್ಲಿ ಗೋಚರವಾಗುತ್ತಾ?

ಸಮಗ್ರ ನ್ಯೂಸ್: ಈ ವರ್ಷದ ಮೊದಲನೇ ಚಂದ್ರಗ್ರಹಣ ಇಂದು(ಮೇ.5) ಸಂಭವಿಸಲಿದೆ. ಆದರೆ ಭಾರತದಲ್ಲಿ ಈ ಚಂದ್ರ ಗ್ರಹಣ ಗೋಚರವಾಗುವುದಿಲ್ಲ. ಈ ವರ್ಷದ ಪ್ರಥಮ ಸೂರ್ಯ ಗ್ರಹಣ ಸಂಭವಿಸಿ 15 ದಿನ ಕಳೆದಿದೆ. ಇದರ ಬೆನ್ನಲ್ಲೇ ಚಂದ್ರ ಗ್ರಹಣ ಸಹ ಸಂಭವಿಸುತ್ತಿದೆ. ವೈಶಾಖ ಮಾಸದ ಹುಣ್ಣಿಮೆ ಆಗಿದ್ದು, ಈ ಸಂದರ್ಭ ಚಂದ್ರ ಗ್ರಹಣ ನಡೆಯಲಿದೆ.

Ad Widget ... ..

ಈ ಗ್ರಹಣವು ಪೆನಂಬ್ರಲ್ ಚಂದ್ರ ಗ್ರಹಣವಾಗಿದ್ದು, ಇದರಲ್ಲಿ ಚಂದ್ರನ ಮೇಲ್ಮೈ ಧೂಳಿನ ಬಿರುಗಾಳಿಯಂತೆ ಕಾಣಿಸಲಿದೆ. ಖಗೋಳಶಾಸ್ತ್ರಜ್ಞರ ಪ್ರಕಾರ, ವರ್ಷದ ಮೊದಲ ಚಂದ್ರ ಗ್ರಹಣವು ಯುರೋಪ್, ಏಷ್ಯಾದ ಹೆಚ್ಚಿನ ಭಾಗಗಳು, ಆಸ್ಟ್ರೇಲಿಯಾ, ಆಫ್ರಿಕಾ, ಪೆಸಿಫಿಕ್, ಅಟ್ಲಾಂಟಿಕ್, ಅಂಟಾರ್ಕ್ಟಿಕಾ ಮತ್ತು ಹಿಂದೂ ಮಹಾಸಾಗರದಲ್ಲಿ ಗೋಚರಿಸುತ್ತದೆ.

Ad Widget

ಭಾರತದಲ್ಲಿ ಈ ಚಂದ್ರ ಗ್ರಹಣದ ನೋಟಕ್ಕೆ ಸಂಬಂಧಿಸಿದಂತೆ, ಹೆಚ್ಚಿನ ಖಗೋಳಶಾಸ್ತ್ರ ತಜ್ಞರು ಮತ್ತು ಹಿಂದೂ ಪಂಚಾಂಗ ಲೆಕ್ಕಾಚಾರಗಳ ಆಧಾರದ ಮೇಲೆ ಈ ಚಂದ್ರ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ.

ಭಾರತೀಯ ಕಾಲಮಾನದ ಪ್ರಕಾರ, ವರ್ಷದ ಮೊದಲ ಚಂದ್ರ ಗ್ರಹಣವು ಮೇ 5ರಂದು ರಾತ್ರಿ 8:44ಕ್ಕೆ ಪ್ರಾರಂಭವಾಗಲಿದ್ದು, ಇದು ಮಧ್ಯರಾತ್ರಿಯವರೆಗೆ ಅಂದರೆ ಮಧ್ಯಾಹ್ನ 1.01 ರವರೆಗೆ ಮುಂದುವರಿಯುತ್ತದೆ. ಗ್ರಹಣದ ಗರಿಷ್ಠ ಅವಧಿ ರಾತ್ರಿ 10:52ಕ್ಕೆ ಇರುತ್ತದೆ. ಇದು ಪೆನಂಬ್ರಲ್ ಚಂದ್ರ ಗ್ರಹಣವಾಗಲಿದೆ. ಭೂಮಿಯ ನೆರಳು ನೇರವಾಗಿ ಚಂದ್ರನ ಮೇಲೆ ಬೀಳದಿದ್ದಾಗ, ಅದನ್ನ ಪೆನಂಬ್ರಲ್ ಚಂದ್ರ ಗ್ರಹಣ ಎಂದು ಕರೆಯಲಾಗುತ್ತದೆ.

Leave a Comment

Your email address will not be published. Required fields are marked *