ಮೈಸೂರು ಮಹಾರಾಜರು ಸ್ಥಾಪಿಸಿದ ಭದ್ರಾವತಿ ವಿಐಎಸ್ಎಲ್ ಮುಚ್ಚುವ ನಿರ್ಧಾರ ಕೈಬಿಡಿ – ಮುರುಘ ರಾಜೇಂದ್ರ ಸ್ವಾಮೀಜಿ‌ ಒತ್ತಾಯ

ಸಮಗ್ರ ನ್ಯೂಸ್: ಮೈಸೂರು ಮಹಾರಾಜರು ತಮ್ಮಲ್ಲಿದ್ದ ಬಂಗಾರ ಮಾರಾಟ ಮಾಡಿ ಸ್ಥಾಪಿಸಿದ ವಿಐಎಸ್‍ಎಲ್ ಕಾರ್ಖಾನೆ ಮುಚ್ಚುವ ನಿರ್ಧಾರವನ್ನು ಸರ್ಕಾರ ಪುನರ್ ಪರಿಶೀಲನೆ ಮಾಡಬೇಕು ಎಂದು ಮಲೆನಾಡು ವೀರಶೈವ ಲಿಂಗಾಯತ ಮಠಾಧೀಶರರ ಪರಿಷತ್ ಅಧ್ಯಕ್ಷ ಆನಂದಪುರ ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಒತ್ತಾಯಿಸಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget .

‘ಪರಿಷತ್ತು ಸಾಮಾಜಿಕ ಸಮಸ್ಯೆಗಳ ಸ್ಪಂದನೆಗಾಗಿ ರಚಿಸಲ್ಪಟ್ಟಿದೆ. ಬಿಳಿಕಿ ಶ್ರೀಗಳಿಂದಾಗಿ ವಿಐಎಸ್‍ಎಲ್ ವಿಚಾರ ಹೊತ್ತು ಬಂದಿದ್ದೇವೆ. ಇಂದು ಪರಿಷತ್ತಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಸನ್ಮಾನಿಸಿ ಕಾರ್ಖಾನೆ ಕುರಿತು ಮಾತನಾಡಿದ್ದೇವೆ. ಬೆಂಕಿಯಲ್ಲಿ ಬೆಂದು ಬೆವರು ಸುರಿಸುವ ನಿಮ್ಮೆಲ್ಲರ ಬದುಕು ಬೀದಿಗೆ ಬೀಳಬಾರದು. ದೇಶ ಆಳುವವರು ಸಾಮಾಜಿಕವಾಗಿ ಚಿಂತಿಸಬೇಕು. ಇಲ್ಲದಿದ್ದಲ್ಲಿ ಶ್ರಮಿಕರ ಶಾಪ ತಟ್ಟದೇ ಬಿಡದು. ಹಿಂದೆ ತುಂಗಭದ್ರಾ ಶುಗರ್ಸ್ ಮುಚ್ಚಿ ಇಂದಿಗೂ ಶಿವಮೊಗ್ಗ ಆರ್ಥಿಕವಾಗಿ ಸದೃಢವಾಗಿಲ್ಲ. ಅದೇ ರೀತಿ ವಿಐಎಸ್‍ಎಲ್ ಮುಚ್ಚದರೆ ಗಂಭೀರ ಸ್ಥಿತಿ ಉಂಟಾಗುತ್ತದೆ’ ಎಂದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕಾರ್ಖಾನೆ ಮುಚ್ಚುವ ನಿರ್ಧಾರ ಸರ್ಕಾರ ಪುನರ್ ಪರಿಶೀಲನೆ ಮಾಡಲಿ ಎಂದು ಪರಿಷತ್ತು ಒತ್ತಾಯಿಸುತ್ತದೆ. ನಮ್ಮ ನಿಮ್ಮೆಲ್ಲರ ಧ್ವನಿ ಸರಕಾರಕ್ಕೆ ಮುಟ್ಟಿ ಕಾರ್ಖಾನೆ ಉಳಿಯಲಿ ಎಂದು ಆಶಿಸುತ್ತದೆ ಎಂದರು.

Leave a Comment

Your email address will not be published. Required fields are marked *