ನಿಗದಿತ ಅವಧಿಗಿಂತ 5ಗಂಟೆ ಮೊದಲೇ ಸಿಂಗಾಪುರಕ್ಕೆ ಹಾರಿದ ವಿಮಾನ| ಪ್ರಯಾಣಿಕರು ಏರ್ ಪೋರ್ಟ್ ನಲ್ಲೇ ಬಾಕಿ

ಸಮಗ್ರ ನ್ಯೂಸ್: ವಿಮಾನ ಹತ್ತಲು ಸಿದ್ಧರಾಗಿದ್ದ 35 ಮಂದಿಯನ್ನು ವಿಮಾನ ನಿಲ್ದಾಣದಲ್ಲಿಯೇ ಬಿಟ್ಟು ಸ್ಕೂಟ್ ಏರ್​ಲೈನ್ಸ್​ನ ವಿಮಾನವು ಅಮೃತಸರದಿಂದ ಸಿಂಗಪುರಕ್ಕೆ ಬುಧವಾರ (ಜ 18) ಹಾರಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Ad Widget ... ..

ಈ ಸಂಬಂಧ ನಾಗರಿಕ ವಿಮಾನಯಾನದ ಮಹಾ ನಿಯಂತ್ರಕರು ತನಿಖೆಗೆ ಆದೇಶಿಸಿದ್ದಾರೆ. ಬುಧವಾರ ಸಂಜೆ 7.55ಕ್ಕೆ ವಿಮಾನವು ಸಿಂಗಪುರಕ್ಕೆ ಹಾರಬೇಕಿತ್ತು. ಆದರೆ ಸಂಜೆ 3 ಗಂಟೆಗೇ ವಿಮಾನವು ಹಾರಾಟ ಆರಂಭಿಸಿತು. ಇದರಿಂದಾಗಿ ವಿಮಾನ ಹತ್ತಬೇಕಿದ್ದ 35 ಮಂದಿ ವಿಮಾನ ನಿಲ್ದಾಣ ತಲುಪಿದರೂ ಪ್ರಯೋಜನವಾಗಲಿಲ್ಲ.

Ad Widget

ವಿಮಾನದ ಸಿಬ್ಬಂದಿಯ ನಿರ್ಲಕ್ಷ್ಯ ಧೋರಣೆಯಿಂದ ಬೇಸತ್ತ ಪ್ರಯಾಣಿಕರು ಅಮೃತಸರ ವಿಮಾನ ನಿಲ್ದಾಣದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದ್ದಲ್ಲದೆ ಪ್ರತಿಭಟನೆಯನ್ನೂ ನಡೆಸಿದರು.

ಇತ್ತೀಚೆಗಷ್ಟೇ ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ‘ಗೋಫಸ್ಟ್​’ ಕಂಪನಿಯ ವಿಮಾನವು 50ಕ್ಕೂ ಹೆಚ್ಚು ಪ್ರಯಾಣಿಕರನ್ನು ನಿಲ್ದಾಣದಲ್ಲಿಯೇ ಬಿಟ್ಟು ಹಾರಿದ್ದನ್ನು ಇಲ್ಲಿ ಸ್ಮರಿಸಬಹುದು.

Leave a Comment

Your email address will not be published. Required fields are marked *