ಉಡುಪಿ: ಬ್ರೈನ್ ಟ್ಯೂಮರ್ ಗೆ ಬಲಿಯಾದ ರಾಜ್ಯಮಟ್ಟದ ಕ್ರಿಕೆಟರ್

ಸಮಗ್ರ ನ್ಯೂಸ್: ಬ್ರೈನ್ ಟ್ಯೂಮರ್‌ನಿಂದಾಗಿ ರಾಜ್ಯ ಮಟ್ಟದ ಕ್ರಿಕೆಟ್ ಆಟಗಾರನೊಬ್ಬ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ನಡೆದಿದೆ.
ಮೃತಪಟ್ಟವರನ್ನು ಪೆಡೂ೯ರು ಬುಕ್ಕಿಗುಡ್ಡೆ ರಕ್ಷಿತ್ ಶೆಟ್ಟಿ (29) ಎಂದು ಗುರುತಿಸಲಾಗಿದೆ.

Ad Widget ... ..

ಹೆಬ್ರಿಯ ಗೆಳೆಯರ ಬಳಗ ಪೆರ್ಡೂರು ತಂಡದ ಮೂಲಕ ರಕ್ಷಿತ್ ಶೆಟ್ಟಿ ಕ್ರಿಕೆಟ್ ಆಟವನ್ನು ಪ್ರಾರಂಭಿಸಿದ್ದರು. ಬಳಿಕ ವಿವಿಧ ಜಿಲ್ಲಾ ಮಟ್ಟದ ತಂಡಗಳಲ್ಲಿ ಆಡಿ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

Ad Widget

ರಾಜ್ಯ ಮಟ್ಟದಲ್ಲಿಯೂ ರಕ್ಷಿತ್ ಗುರುತಿಸಿಕೊಂಡಿದ್ದರು. ಬೌಲಿಂಗ್‌ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಅವರು, ತಮ್ಮ ಆಕರ್ಷಕ ಶೈಲಿಯ ಬೌಲಿಂಗ್ ಮೂಲಕ ಕ್ರಿಕೆಟ್ ಅಭಿಮಾನಿಗಳಿಂದ ಪ್ರಶಂಸೆ ಗಿಟ್ಟಿಸಿಕೊಂಡಿದ್ದರು. ಎಸ್.ಝಡ್‌.ಸಿ.ಸಿ ಮತ್ತು ಎಮ್‌.ಬಿ.ಸಿ.ಸಿ ತಂಡಗಳ ಪರವಾಗಿ ಆಡಿದ್ದರು.

Leave a Comment

Your email address will not be published. Required fields are marked *