ಸಮಗ್ರ ನ್ಯೂಸ್: ರಾಮಭಕ್ತರಿಗೆ ಕೇಂದ್ರಸಚಿವ ಅಮಿತ್ ಶಾ ಗುಡ್ ನ್ಯೂಸ್ ನೀಡಿದ್ದು, 2024ರ ಜನವರಿ 1ಕ್ಕೆ ಅಯೋಧ್ಯೆ ರಾಮಮಂದಿರ ನಿರ್ಮಾಣ ಪೂರ್ಣಗೊಳ್ಳಲಿದ್ದು, ಅಂದು ದೇವಸ್ಥಾನದ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದಿದ್ದಾರೆ.
ತ್ರಿಪುರಾದಲ್ಲಿ ನಡೆದ ಸಭೆಯೊಂದರಲ್ಲಿ ಭಾಗವಹಿಸಿದ್ದ ಅಮಿತ್ ಶಾ ಈ ಹೇಳಿಕೆ ನೀಡಿದ್ದಾರೆ. ‘ರಾಹುಲ್ ಗಾಂಧಿ ಪದೇ ಪದೇ ಅಯೋಧ್ಯೆ ರಾಮಮಂದಿರವನ್ನ ಲೇವಡಿ ಮಾಡುತ್ತಾರೆ. ಅಲ್ಲಿ ನಿರ್ಮಾಣ ಮಾಡುತ್ತಿದ್ದಾರಾದರೂ ಪೂರ್ಣಗೊಳ್ಳುವ ದಿನಾಂಕವನ್ನ ಹೇಳುವುದಿಲ್ಲ ಎನ್ನುತ್ತಿದ್ದರು. ಆದರೆ ಈಗ ನಾನು ಹೇಳುತ್ತಿದ್ದೇನೆ. ರಾಹುಲ್ ಬಾಬಾ, ಎಚ್ಚರಿಕೆಯಿಂದ ಆಲಿಸಿ. ನಿಮ್ಮ ಕಿವಿಗಳನ್ನು ತೆರೆಯಿರಿ. ಜನವರಿ 1, 2024 ರೊಳಗೆ ರಾಮಮಂದಿರವು ಪೂರ್ಣಗೊಳ್ಳುತ್ತದೆ’ ಎಂದರು.