ಸೌದಿಯಲ್ಲಿ ಭೀಕರ ಅಪಘಾತ| ಸುರತ್ಕಲ್ ನ ಯುವಕ ದುರ್ಮರಣ

ಸಮಗ್ರ ನ್ಯೂಸ್: ಕಾರು ಹಾಗೂ ಲಾರಿ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಸುರತ್ಕಲ್ ತಡಂಬೈಲ್ ನ ಯುವಕನೋರ್ವ ಮೃತಪಟ್ಟಿರುವ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ.

Ad Widget ... ..

ತಡಂಬೈಲ್ ಫಾತಿಮಾ ಸೂಪರ್ ಮಾರ್ಕೆಟ್ ನ ಅದ್ದು ಎಂಬವರ ಪುತ್ರ ಫಾಝಿಲ್ ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ.

Ad Widget

ಫಾಝಿಲ್ ಅವರು ಒಂದೂವರೆ ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದಾರೆ ಎಂದು ತಿಳಿದು ಬಂದಿದ್ದು, ಫಾಝಿಲ್ ತನ್ನ ಪತ್ನಿ ಮಗುವಿನೊಂದಿಗೆ ಸೌದಿ ಅರೇಬಿಯಾದಲ್ಲೇ ವಾಸವಾಗಿದ್ದರು.

ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಫಾಝಿಲ್ ಕಳೆದ 5 ವರ್ಷಗಳಿಂದ ಸೌದಿಯ ಜುಬೈಲಿನ ಅಲ್ ಬತೀನಿ ಸ್ಕಫೋಲ್ಡಿಂಗ್ ಕೊಂಟ್ರಾಕ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಅಲ್ ಹಸ್ಸದ ಅಲ್ ಜೂಫ್ರಾನ್ ಪ್ರಾಜೆಕ್ಟ್ ಸೈಟಿಗೆ ಭೇಟಿ ನೀಡಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ, ರಿಯಾದ್ ನಿಂದ ಸುಮಾರು 260 ಕಿ.ಮೀ ದೂರದಲ್ಲಿ ಈ ಅಪಘಾತ ನಡೆದಿದೆ. ಫಾಝಿಲ್ ಮೃತದೇಹವನ್ನು ಹತ್ತಿರದ ಅಬ್ಕೆಕ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

Leave a Comment

Your email address will not be published. Required fields are marked *