ಸಮಗ್ರ ನ್ಯೂಸ್: ರಿಲಯನ್ಸ್ ಸಂಸ್ಥಾಪಕ ಅಧ್ಯಕ್ಷ ಧೀರೂಭಾಯಿ ಅಂಬಾನಿ ಅವರು 25 ವರ್ಷಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಿಲಯನ್ಸ್ ವಿದ್ಯಾರ್ಥಿವೇತನವನ್ನು ನೀಡುತ್ತಿದ್ದಾರೆ.
ಈ ವಿದ್ಯಾರ್ಥಿ ವೇತನ ಭಾರತದಾದ್ಯಂತ 13,000 ಯುವಕರ ಜೀವನಕ್ಕೆ ಸಹಾಯ ಮಾಡಿದೆ. 1996 ರಲ್ಲಿ ಈ ಯೋಜನೆಯನ್ನು ಇವರು ಆರಂಭಿಸಿದ್ದು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣವನ್ನು ಪಡೆಯಲು ಪ್ರೋತ್ಸಾಹಿಸುವುದು ಇದರ ಉದ್ದೇಶವಾಗಿದೆ. ಐಐಟಿಗಳು, ಐಐಎಂಗಳು ಸೇರಿದಂತೆ ಪ್ರಮುಖ ಸಂಸ್ಥೆಗಳಿಂದ ಹೆಚ್ಚಿನ ಉನ್ನತ ಶಿಕ್ಷಣವನ್ನು ಪೂರೈಸಲು ಇದು ವಿದ್ಯಾರ್ಥಿಗಳಿಗೆ ಸಹಾಯವಾಗಿದೆ.
ಪದವಿಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಉನ್ನತ ಶಿಕ್ಷಣ ಪೂರೈಸುತ್ತಿರುವ ವಿದ್ಯಾರ್ಥಿಗಳು ಇದರ ಫಲಾನುಭವಿಗಳಾಗಿದ್ದು, ಸಂಸ್ಥೆಯ ಅಧಿಕೃತ ಜಾಲತಾಣದಲ್ಲಿ ವಿವರಗಳನ್ನು ಪಡೆಯಬಹುದು. ಅಥವಾ WhatsApp ನಂಬರ್ 7977100100 ಗೆ ‘Hi’ ಎಂದು ಮೆಸೇಜ್ ಮಾಡಿ ವಿವರ ಪಡೆಯಬಹುದು.
ಈ ವಿದ್ಯಾರ್ಥಿ ವೇತನಕ್ಕೆ ಅಪ್ಲೈ ಮಾಡಬಹುದು. ಯಾವುದೇ ಹೆಚ್ಚುವರಿ ಪ್ರಶ್ನೆಗಳಿಗಾಗಿ ನೀವು ಸುಲಭವಾಗಿ ವಾಟ್ಸಾಪ್ ಮೂಲಕ ಒಂದು ಮೆಸಜ್ ಹಾಕಿದರೆ ಸಾಕು ನೀವು ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಬಹುದು. WhatsApp ನಲ್ಲಿ “ಹಾಯ್” ಎಂದು 7977100100 ಗೆ ಒಂದು ಮೆಸೆಜ್ ಮಾಡಿದರೆ ಸಾಕು.
ಅಗತ್ಯ ದಾಖಲೆಗಳು
- ವೈಯಕ್ತಿಕ ಮತ್ತು ಸಂಪರ್ಕ ಮಾಹಿತಿ
- ಶೈಕ್ಷಣಿಕ ಮಾಹಿತಿ
- ಸಾಧನೆಗಳು ಮತ್ತು ಪ್ರಶಸ್ತಿಗಳು
- ಪೋಷಕ ದಾಖಲೆಗಳು
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಫೆಬ್ರವರಿ 14 2023 ಆಗಿದ್ದು, ಈ ಕೆಳಗಿನ ಅಭ್ಯರ್ಥಿಗಳು ಅಪ್ಲೈ ಮಾಡಬಹುದು.
- ಪದವಿ ಮೊದಲನೇ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳೂ ಸಹ ಈ ಸ್ಕಾಲರ್ಶಿಪ್ಗೆ ಅಪ್ಲೈ ಮಾಡಬಹುದು.
- ನೀವು ಈ ಹಿಂದೆ ಅಪ್ಲೈ ಮಾಡಿದ್ದರೂ ಸಹ ಮತ್ತೆ ಈ ಬಾರಿ ಅಪ್ಲೈ ಮಾಡಬಹುದು.
- ಅಪ್ಲಿಕೇಶನ್ ತಪ್ಪಾಗಿ ತುಂಬಿದ್ದರೆ ಮತ್ತೊಮ್ಮೆ ನೀವು ಪುನಃ ಅರ್ಜಿ ತುಂಬ ಬಹುದು.
- ಭಾರತ ದೇಶದ ಎಲ್ಲಾ ವಿದ್ಯಾರ್ಥಿಗಳೂ ಸಹ ಅಪ್ಲೈ ಮಾಡಬಹುದು.
- 25 ವರ್ಷದೊಳಗಿನ ವಿದ್ಯಾರ್ಥಿಗಳು ಇದಕ್ಕೆ ಅಪ್ಲೈ ಮಾಡಬಹುದು.
- ನಿಮ್ಮ ಕುಟುಂಬದ ಆದಾಯದ ಮೇಲೆ ನಿಮ್ಮ ವಿದ್ಯಾರ್ಥಿ ವೇತನದ ಮೊತ್ತ ನಿರ್ದಾರವಾಗುತ್ತದೆ. 2 ರಿಂದ 6 ಲಕ್ಷದವರೆಗೆ ನೀವು ವಿದ್ಯಾರ್ಥಿ ವೇತನ ಪಡೆಯಬಹುದು.
ಅರ್ಜಿ ಸಲ್ಲಿಸುವುದು ಹೇಗೆ?
ಸಂಸ್ಥೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ, ಮುಖಪುಟ ತೆರೆಯುತ್ತದೆ. ಅವರು ನೀಡಿದ ಮಾಹಿತಿಯನ್ನು ಸರಿಯಾಗಿ ನೀಡಿ ಬಳಿಕ ನಿಯಮ ಹಾಗೂ ಷರತ್ತುಗಳನ್ನು ಒಪ್ಪಿಕೊಳ್ಳಿ. ಸರಿಯಾದ ಸಂಪರ್ಕ ಸಂಖ್ಯೆ ನೀಡಿ. ಇ-ಮೇಲ್ ಐಡಿ ಸರಿಯಾಗಿ ನಮೂದಿಸಿ. ಕ್ಯಾಪ್ಚಾ ನೀಡುತ್ತಾರೆ ಅದನ್ನು ಸರಿಯಾಗಿ ತುಂಬಿ. ಮತ್ತೊಮ್ಮೆ ಎಲ್ಲಾ ಮಾಹಿತಿ ಸರಿಯಾಗಿ ನಮೂದಿಸಿದ್ದೀರಾ ಎಂದು ಪರಿಶೀಲಿಸಿ. ಕೊನೆಯದಾಗಿ ಸಬ್ಮೀಟ್ ಕೊಡಿ, ಸೇವ್ ಮಾಡಿ. ಒಂದು ಹಾರ್ಡ್ ಕಾಫಿ ತೆಗೆದುಕೊಳ್ಳಿ
ನೀವು ಇದಕ್ಕೆ ಆಯ್ಕೆ ಯಾಗಬೇಕು ಎಂದಾದರೆ ಒಂದು ಪರೀಕ್ಷೆ ಪಾಸ್ ಆಗಬೇಕು ಅದು ಈ ಸ್ಕಾಲರ್ ಶಿಪ್ಗೆ ಸಂಬಂಧಿಸಿದ ಪರೀಕ್ಷೆಯಾಗಿದ್ದು. ಆಪ್ಟಿಟ್ಯೂಡ್ ಟೆಸ್ಟ್ ಆಗಿರುತ್ತದೆ.
ಎಲ್ಲಾ ಅರ್ಜಿದಾರರು ಆನ್ಲೈನ್ ಆಪ್ಟಿಟ್ಯೂಡ್ ಪರೀಕ್ಷೆಗೆ ಉತ್ತರಿಸಲು ಪರೀಕ್ಷೆಯ ಅವಧಿಯು 60 ನಿಮಿಷಗಳು ಮತ್ತು 60 ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.
ಪರೀಕ್ಷೆಯು ಮೌಖಿಕ ಸಾಮರ್ಥ್ಯ, ವಿಶ್ಲೇಷಣಾತ್ಮಕ ಮತ್ತು ಲಾಂಗ್ ಆನ್ಸ್ರ್ ಪ್ರಕಾರವನ್ನು ಒಳಗೊಂಡಿರುತ್ತದೆ. ನಿಮ್ಮ ಸಾಮರ್ಥ್ಯ ಮತ್ತು ಅಂಕದ ಆಧಾರದ ಮೇಲೆ ನೀವು ಆಯ್ಕೆಯಾಗುತ್ತೀರೋ ಇಲ್ಲವೋ ಎಂಬುದು ತಿಳಿಯುತ್ತದೆ.