ಮೊದಲ ರಾತ್ರಿ ಶೋಭನದ ಕೋಣೆಗೆ ಹಾಲನ್ಯಾಕೆ ತಗೊಂಡೋಗ್ತಾರೆ ಗೊತ್ತಾ?

Ad Widget ... ..

ವಿವಾಹವೆಂಬುದು ಎರಡು ಹೃದಯಗಳ ಬೆಸುಗೆ. ಅದರಲ್ಲು ವಿವಾಹದ ಬಳಿಕದ ಮೊದಲ ರಾತ್ರಿಗೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷವಾದ ಪ್ರಾಶಸ್ತ್ಯವಿದೆ. ಶೋಭನವನ್ನು ವಧು ವರನ ಜೀವನಕ್ಕೆ ಒಯ್ಯುವ ಅದೃಷ್ಟದ ಸಂಕೇತವೆಂದು ನಂಬಲಾಗಿದೆ. ಅದರಲ್ಲೂ ಮೊದಲ ರಾತ್ರಿಯಲ್ಲಿ ವಧುವಿನ ಕೈಯಲ್ಲಿರುವ ಹಾಲಿನ ಲೋಟಕ್ಕೆ ಅದರದ್ದೇ ಆದ ಮಹತ್ವವಿದೆ.
ಪ್ರಾಚೀನ ಭಾರತೀಯರು ಕೃಷಿಕರಾಗಿದ್ದರಿಂದ, ಜಾನುವಾರು ಸಾಕಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ, ಮತ್ತು ಗೋವಿನ ಸಗಣಿಯಿಂದ ತುಪ್ಪದವರೆಗೆ ಪ್ರತಿದಿನ ಬಳಸಲಾಗುತ್ತದೆ. ಆರ್ಥಿಕವಾಗಿ ಸ್ಥಿರವಾದ ರೈತರು ಹೆಚ್ಚು ಜಾನುವಾರುಗಳನ್ನು ಹೊಂದಿದ್ದರು. ಅದಕ್ಕಾಗಿ ಹೈನುಗಾರಿಕೆ ಕೂಡಾ ಭಾರತೀಯರ ಸಂಸ್ಕೃತಿಯೊಳಗೆ ಒಂದಾಗಿದೆ.

Ad Widget

ಮದುವೆಯಾದ ಬಳಿಕ ಶೋಭನ ಕೋಣೆಗೆ ವಧು ಹಾಲಿನ ಗ್ಲಾಸ್‍ನೊಂದಿಗೆ ಹೋಗುವುದನ್ನು ಬಹಳಷ್ಟು ಸಿನಿಮಾಗಳಲ್ಲಿ ನೋಡಿಯೇ ಇರುತ್ತೇವೆ. ಯಾಕೆ ಹಾಲಿನ ಗ್ಲಾಸ್‌ನೊಂದಿಗೆ ಶೋಭನದ ಕೋಣೆಗೆ ಹೋಗುತ್ತಾರೆ ಅಂತ ನಿಮಗೆ ಎಂದಿನಿಂದಲೋ ಡೌಟ್ ಇದ್ದೇ ಇರುತ್ತದೆ. ಇಷ್ಟಕ್ಕೂ ಹಾಲಿನ ಗ್ಲಾಸ್ ಕಥೆ ಏನು ಎಂಬುದನ್ನು ಈಗ ನೋಡೋಣ.

ಶೋಭನ ಕೋಣೆಗೆ ಹೋಗುವ ಮದು ಮಗಳು ಒಯ್ಯಾರದಿಂದ ಹಾಲಿನ ಗ್ಲಾಸಿನೊಂದಿಗೆ ಅಡಿಯಿಡುತ್ತಾಳೆ. ಆ ಬಳಿಕ ಆ ಹಾಲನ್ನು ಗಂಡ ಹೆಂಡತಿ ಸೇರಿ ಅರ್ಧರ್ಧ ಹಂಚಿಕೊಂಡು ಕುಡಿಯುತ್ತಾರೆ. ಹೊಸದಾಗಿ ಮದುವೆಯಾದ ಜೋಡಿ ಮೊದಲ ಸಲ ಭೇಟಿಯಾದಾಗ ಸ್ವಲ್ಪ ಭಯ ಫೀಲಾಗುತ್ತದೆ. ಆ ಭಯವನ್ನು ಹೋಗಲಾಡಿಸಲು ಹುಡುಗಿ ಕೈಯಲ್ಲಿ ಹಾಲಿನ ಗ್ಲಾಸನ್ನು ಕೊಟ್ಟು ಒಳಗೆ ಕಳುಹಿಸುತ್ತಾರೆ. ಹಾಲನ್ನು ಅರ್ಧರ್ಧ ಹಂಚಿಕೊಳ್ಳುವುದರಿಂದ ಅವರ ನಡುವೆ ಸ್ವಲ್ಪ ಬಂಧನ ಏರ್ಪಡುತ್ತದೆ. ಹಾಲಿನಿಂದ ಬಿಡುಗಡೆಯಾಗುವ ಹ್ಯಾಪಿ ಹಾರ್ಮೋನ್ಸ್‌ನಿಂದ ಮನಸು ಸಾಕಷ್ಟು ರಿಲ್ಯಾಕ್ಸ್ ಆಗುತ್ತದೆ. ಅದೇ ರೀತಿ ಶೃಂಗಾರ ಪ್ರೇರಣೆ ಉಂಟಾಗಿ ಇಬ್ಬರೂ ಒಂದಾಗುತ್ತಾರೆ.
ಶೋಭನದ ದಿನ ನೀಡುವ ಹಾಲಿಗೆ ತುಂಬಾ ವಿಶೇಷತೆ ಇದೆ. ಇದು ಕೇವಲ ಹಾಲು ಎಂದುಕೊಂಡರೆ ಮಾತ್ರ ತಪ್ಪಾಗುತ್ತದೆ. ಈ ಹಾಲಿನಲ್ಲಿ ವಿಶೇಷವಾಗಿ ಬಾದಾಮಿ, ಮೆಣಸಿನ ಪುಡಿ, ಕೇಸರಿ ಹೂವು ಬೆರೆಸಿರುತ್ತಾರೆ. ಇದು ಎನರ್ಜಿ ಡ್ರಿಂಕ್ ರೀತಿ ಕೆಲಸ ಮಾಡುತ್ತದೆ. ಇದರಿಂದ ಲಿಬಿಡೋ ಪ್ರಮಾಣ ಹೆಚ್ಚಾಗಿ ಶರೀರಕ್ಕೆ ಪ್ರೋಟೀನ್‍ಗಳು ಸಿಗುತ್ತವೆ. ಇದರಲ್ಲಿನ ಅಮೀನೋ ಆಸಿಡ್ ವರನಿಗೆ ಲೈಂಗಿಕ ಶಕ್ತಿ ಹೆಚ್ಚಿಸುತ್ತದೆ. ಹಾಲಲ್ಲಿ ಇರುವ ಪ್ರೋಟೀನ್‌ಗಳು ಹಾರ್ಮೋನ್‌ಗಳನ್ನು ವೃದ್ಧಿಸುತ್ತವೆ ರತಿ ಸಮಯದಲ್ಲಿ ಇಬ್ಬರ ದೇಹದ ಉಷ್ಣತೆಗಳು ಹೆಚ್ಚುತ್ತವೆ. ಆ ಬಿಸಿ ಕಡಿಮೆ ಮಾಡಲು ಹಾಲು ಉಪಯೋಗಕ್ಕೆ ಬರುತ್ತವೆ.

ಆದರೆ ಶೋಭನ ಕೋಣೆಯಲ್ಲಿ ಹಾಲು ಕುಡಿಯಬೇಕು ಎಂಬ ಸಂಪ್ರದಾಯ ಅನಾದಿ ಕಾಲದಿಂದಲೂ ಬರುತ್ತಿದೆ. ಈ ಪ್ರಸ್ತಾವನೆ ಕಾಮಸೂತ್ರದಲ್ಲೂ ವಿಶೇಷವಾಗಿ ವಿವರಿಸಲಾಗಿದೆ. ಸೆಕ್ಸ್ ಸಮಯದಲ್ಲಿ ಶಕ್ತಿ, ಸಾಮರ್ಥ್ಯಗಳು ಬೆಳೆಯಲು ಆಗ ಹಾಲು ಕುಡಿಯುತ್ತಿದ್ದರಂತೆ. ಮುಖ್ಯವಾಗಿ ವಧು ತನ್ನ ಕೈಗಳಿಂದ ಹಾಲಿನ ಗ್ಲಾಸನ್ನು ಹಿಡಿದು ವರನ ಕಣ್ಣಲ್ಲಿ ನೋಡುತ್ತಾ ಹಾಲು ಕುಡಿಸುತ್ತಿದ್ದಳಂತೆ. ರತಿಕ್ರೀಡೆಗೂ ಮುನ್ನ ಸ್ತ್ರೀ ಪುರುಷರಿಬ್ಬರೂ ಸೋಂಪು, ಅರಿಶಿಣ, ಜೇನು, ಸಕ್ಕರೆ, ಮೆಣಸು ಬೆರೆಸಿದ ಹಾಲನ್ನು ಹೆಚ್ಚು ಸೇವಿಸುತ್ತಿದ್ದರಂತೆ. ಆ ರೀತಿ ಆರಂಭವಾದ ಸಂಪ್ರದಾಯ ಈಗಲೂ ಮುಂದುವರೆಯುತ್ತಿದೆ.
ಆರೋಗ್ಯಕರ ಜೀವನಕ್ಕೆ ಪ್ರತಿಯೊಬ್ಬರೂ ದಿನಂಪ್ರತಿ ರಾತ್ರಿ ಹಾಲು ಕುಡಿಯಬೇಕೆಂಬುದನ್ನು ವೈದ್ಯಲೋಕವೂ ಅಭಿಪ್ರಾಯ ಪಡುತ್ತದೆ.

Leave a Comment

Your email address will not be published. Required fields are marked *