Ad Widget

ಒಲವಿನ ಸೂಜಿಯ‌ ಚುಚ್ಚಿದಳೇ‌? ಹಾಳಾದ ಹೃದಯ ತಟ್ಟಿದಳೇ?

Ad Widget . Ad Widget . Ad Widget . Ad Widget . Ad Widget . Ad Widget

ಬೆಂಗಳೂರು: ಸದ್ಯ ಕೊರೊನಾ ತಡೆಗೆ ಎಲ್ಲೆಡೆ ವ್ಯಾಕ್ಸಿನ್ ಹಾಕಲಾಗುತ್ತಿದೆ. ಅದರಂತೆ ದೇಶದ ಜನ ಕೂಡ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮುಗಿಬೀಳುತ್ತಿದ್ದಾರೆ. ವ್ಯಾಕ್ಸಿನ್ ಗೆ ಹಾಹಾಕಾರ ಶುರುವಾಗಿದೆ. ಈ ಮಧ್ಯೆ ವ್ಯಾಕ್ಸಿನ್ ಹಾಕಿಸಿಕೊಂಡವರ ಫೋಟೊವೊಂದು ವೈರಲ್ ಆಗಿದ್ದು, ತರಹೇವಾರಿ ಕವನಗಳು ಮೂಡಿ ಬರ್ತಾ ಇವೆ.

Ad Widget . Ad Widget .

ವ್ಯಾಕ್ಸಿನ್ ಹಾಕಿಸಿಕೊಳ್ಳುತ್ತಿರುವ ಹುಡುಗ ಇಂಜೆಕ್ಷನ್ ಚುಚ್ಚುತ್ತಿರುವ ನರ್ಸನ್ನೇ ನೋಡುತ್ತಿದ್ದಾನೆ. ಯಾವ ಸೋಷಿಯಲ್ ಮೀಡಿಯಾದಲ್ಲೇ ನೋಡಿದ್ರು ಈ ಫೋಟೊ ಹರಿದಾಡ್ತಾ ಇದೆ. ಆ ಫೋಟೊ ಮೇಲೆ ಕವನಗಳ ಸುರಿಮಳೆಯೇ ಸುರಿಯುತ್ತಿದೆ.

ಅದರಲ್ಲೂ ಎಷ್ಡರ ಮಟ್ಟಿಗೆ ವೈರಲ್ ಆಗುತ್ತಿದೆ ಅಂದ್ರೆ ಹುಡುಗರೆಲ್ಲಾ ನಮ್ಗೂ ಆ ನರ್ಸೇ ವ್ಯಾಕ್ಸಿನ್ ಹಾಕಬಾರದಿತ್ತೇ, ಹುಡುಗಿಯರು, ಆ ನರ್ಸ್ ನಾನಾಗಬಾರದಿತ್ತೆ ಎಂಬೆಲ್ಲಾ ಸಂದೇಶಗಳು ಹರಿದಾಡುತ್ತಿವೆ.
ಆ ಫೋಟೊ ಮೇಲೆ ಮೂಡಿದ ಕವನ ಸಂಕಲನ ಇಂತಿವೆ:

• ಹೇಳಿ ಬಿಡು ಹುಡುಗಿ ನೀ ಚುಚ್ಚಿದ್ದು ನನ್ನ ತೋಳಿಗೋ..ಇಲ್ಲ ಹೃದಯಕ್ಕೋ..?

• ಅದು ಒಲವಿನ ಸೂಜಿಯೋ ಮೊಂಡಾದದ್ದೋ

• ಆತ ಅರಸಿಕನೇ

• ಹೇಳಿ ಬಿಡು ಹುಡಗಿ ನೀ ಚುಚ್ಚಿದ್ದು ಒಲವಿನ ಸೂಜಿಯೆ ಅಥವಾ ಮೊಂಡು ಸೂಜಿಯೆ.

ಸಂಜೀವಿನಿ ಅದು ಬದುಕಿಗೆ.
ರಕ್ಷಣೆ ಅದು ಈ ಹಾಳು ಕರೋನಾಗೆ.
ನೀ ಕೊಟ್ಟ ಗುಳಿಗೆಯದು ನುಂಗಿದೆ.
ಇನ್ನೂ ನೋವ ಗುಂಗು ಹಾಗೆ ಇದೆ.

ಎತ್ತಲಾಗದಾಗಿದೆ ತೋಳು.
ಜೊತೆಗೆ,‌ ತಲೆನೋವೆಂಬ ಗೋಳು

ಈಗಲಾದರೂ ಹೇಳಿಬಿಡು ಹುಡುಗಿ ನೀ ಚುಚ್ಚಿದ್ದು ಒಲವಿನ ಸೂಜಿಯೆ ಅಥವಾ ಮೊಂಡು ಸೂಜಿಯೆ? ಎಂದೆಲ್ಲಾ ಬರೆದಿದ್ದಾರೆ.

Leave a Comment

Your email address will not be published. Required fields are marked *