ಆಸ್ಕರ್ ಪ್ರಶಸ್ತಿಯ ಹತ್ತಿರ ತಲುಪಿದ ಭಾರತ| ಅಂತಿಮ ಸುತ್ತಿಗೆ ಆಯ್ಕೆಯಾದ ನಾಲ್ಕು ಸಿನಿಮಾ

ಸಮಗ್ರ ನ್ಯೂಸ್: ಈ ಬಾರಿಯ ಆಸ್ಕರ್‌ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದ ಭಾರತೀಯ ಚಿತ್ರಗಳಲ್ಲಿ ನಾಲ್ಕು ಚಿತ್ರಗಳನ್ನು ಪ್ರಶಸ್ತಿ ಸುತ್ತಿಗೆ ಅಂತಿಮಗೊಳಿಸಲಾಗಿದೆ.

Ad Widget ... ..

ಗುಜರಾತಿ ಚಿತ್ರ ‘ಛೆಲ್ಲೋ ಶೋ’, ಆರ್‌ಆರ್‌ಆರ್‌ ಚಿತ್ರದ ‘ನಾಟು ನಾಟು’ ಗೀತೆ ಸೇರಿ ನಾಲ್ಕು ಭಾರತೀಯ ಚಿತ್ರಗಳು ಪ್ರಶಸ್ತಿ ಸುತ್ತಿನಲ್ಲಿ ಸ್ಥಾನ ಪಡೆದಿವೆ.

Ad Widget

ಅತ್ಯುತ್ತಮ ಅಂತರರಾಷ್ಟ್ರೀಯ ಚಿತ್ರ ವಿಭಾಗದಲ್ಲಿ ‘ಛೆಲ್ಲೋ ಶೋ’ ಆಯ್ಕೆ ಆಗಿದೆ. ‘ನಾಟು ನಾಟು’ ಗೀತೆಯು ಅತ್ಯುತ್ತಮ ಗೀತೆ (ಮೂಲ ಗೀತೆ) ವಿಭಾಗದಲ್ಲಿ ಸ್ಥಾನ ಪಡೆದಿದೆ. ಸಾಕ್ಷ್ಯಚಿತ್ರ ವಿಭಾಗದಲ್ಲಿ ‘ಆಲ್‌ ದಟ್‌ ಬ್ರೀಥ್ಸ್‌’ ಮತ್ತು ಕಿರು ಸಾಕ್ಷ್ಯಚಿತ್ರ ವಿಭಾಗದಲ್ಲಿ ‘ದಿ ಎಲಿಫ್ಯಾಂಟ್‌ ವಿಸ್ಪರರ್’ ಸ್ಥಾನ ಪಡೆದಿವೆ ಎಂದು ಅಕಾಡೆಮಿ ಆಫ್‌ ಮೋಷನ್‌ ಪಿಕ್ಚರ್ ಆರ್ಟ್ಸ್‌ ಆಯಂಡ್‌ ಸೈನ್ಸಸ್‌ ಘೋಷಿಸಿದೆ.

ಇದೇ ಮೊದಲ ಬಾರಿಗೆ ಭಾರತದ ನಾಲ್ಕು ಚಿತ್ರಗಳು ಆಸ್ಕರ್‌ ಪ್ರಶಸ್ತಿಯ ಪ್ರಶಸ್ತಿ ಸುತ್ತಿನಲ್ಲಿ ಸ್ಥಾನ ಪಡೆದಿರುವುದು ಎನ್ನಲಾಗಿದೆ.

Leave a Comment

Your email address will not be published. Required fields are marked *