Ad Widget .

ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂಯಿಂದ ವಿವಿಧ ಬೇಡಿಕೆಗಳ ಈಡೇರಿಕಗಾಗಿ ಪ್ರತಿಭಟನೆ|ತಹಶೀಲ್ದಾರ್ ಸ್ಥಳಕ್ಕೆ ಭೇಟಿ

ಸಮಗ್ರ ನ್ಯೂಸ್: ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಸಂಘಟನೆಯ ರಾಜ್ಯಾಧ್ಯಕ್ಷ ಸುಂದರ ಪಾಟಾಜೆಯವರ ನೇತೃತ್ವದಲ್ಲಿ ಡಿ.೧೯ ರಂದು ಸುಳ್ಯ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ವಿವಿಧ ಬೇಡಿಕೆಗಳ ಈಡೇರಿಕಗಾಗಿ ಆಗ್ರಹಿಸಿದರು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಜನಪ್ರತಿನಿಧಿಗಳ ಮತ್ತು ಇಲಾಖಾ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಲಾಯಿತು. ಪ್ರತಿಭಟನಾ ಸ್ಥಳಕ್ಕೆ ಸುಳ್ಯ ತಹಶೀಲ್ದಾರ್ ಅನಿತಾ ಲಕ್ಷ್ಮಿ ಬರುತ್ತಿದ್ದಂತೆ ಕಾರ್ಯಕರ್ತರು ಜೋರಾಗಿ ಧಿಕ್ಕಾರದ ಘೋಷಣೆಗಳನ್ನು ಕೂಗತೊಡಗಿದರು.

Ad Widget . Ad Widget . Ad Widget .

ಈ ವೇಳೆ ರಾಜ್ಯಾದ್ಯಕ್ಷ ಸುಂದರ ಪಾಟಾಜೆ ತಮ್ಮ ಬಳಿ ತಂದಿದಂತಹ ವಿವಿಧ ಬೇಡಿಕೆಗಳ ಮನವಿಗಳನ್ನು ತಹಶೀಲ್ದಾರರಿಗೆ ನೀಡಿ ಸುಳ್ಯ ತಾಲೂಕಿನಲ್ಲಿ ಒಟ್ಟು ೭೦೦ ಎಕ್ರೆ ಡಿಸಿ ಮನ್ನಾಜಾಗ ಇದೆ. ಅದರಲ್ಲಿ ೩೦೦ ಎಕ್ರೆ ಮಾತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸಿಕ್ಕಿದೆ. ಉಳಿದ ಜಾಗವೆಲ್ಲ ಮೇಲ್ವರ್ಗದವರು ರೆಕಾರ್ಡ್ ಮಾಡಿಕೊಂಡಿದ್ದಾರೆ ಇದನ್ನು ಸರ್ವೆ ಮಾಡಿ ಪ.ಜಾತಿ ಮತ್ತು ಪ.ಪಂಗಡ ದವರಿಗೆ ನೀಡಬೇಕು.

ಗಾಂಧಿನಗರದ ಡಿಸಿ ಮನ್ನಾ ಜಾಗದಲ್ಲಿ ೧೩ ಮೇಲ್ವರ್ಗದ ಕುಟುಂಬದವರಿಗೆ ರೆಕಾರ್ಡ್ ಮಾಡಿ ಕೊಟ್ಟಿದ್ದು, ಅದನ್ನು ರದ್ದು ಮಾಡಬೇಕು,೩೮೧/೨ ಈ ಸರ್ವೆ ನಂಬರ್ ಜಾಗದಲ್ಲಿ ದಲಿತರಾದ ದಾಸಪ್ಪ ಮೇನಾಲ ಎಂಬವರು ಸುಮಾರು ೪೦ ವರ್ಷಗಳಿಂದ ಈ ಜಾಗದಲ್ಲಿ ವಾಸವಾಗಿದ್ದು ಹಲವು ವರ್ಷಗಳಿಂದ ಅಕ್ತಮ ಸಕ್ರಮಕ್ಕೆ ಅರ್ಜಿ ಹಾಕಿದದರು ರೆಕಾರ್ಡ್ ಮಾಡಿ ಕೊಟ್ಟಿಲ್ಲ. ಆ ಜಾಗದ ಸುತ್ತಮುತ್ತಲಿರುವವರಿಗೆ ರೆಕಾರ್ಡ್ ಮಾಡಿ ನೀಡಲಾಗಿದ್ದು ಇವರಿಗೆ ಮಾತ್ರ ನೀಡದೆ ಸತಾಯಿಸುತ್ತಿದ್ದಾರೆ ಎಂದು ಹೇಳಿದರು.
ಉಬರಡ್ಕ ಮಿತ್ತೂರು ಗ್ರಾಮದ ಕೊಡಿಯಾಲಬೈಲು ದಲಿತ ಕಾಲೊನಿಗೆ ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ ಶೌಚಾಲಯ ಮತ್ತು ಸ್ಥಾನ ಘಟಕದ ಸಂಕೀಣ ಕಟ್ಟಡ ದಲಿತ ಕಾಲೊನಿಗೆ ಬಂದಿದ್ದನ್ನು ಸ್ಥಳ ಬದಳಾವಣೆ ಮಾಡಿ ಹಿಂದೂ ರುದ್ರಭೂಮಿ ಒಳಗೆ ನಿರ್ಮಿಸಿದ್ದಾರೆ. ಇದರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದು ಸಂಬಂಧಪಟ್ಟ ಇಲಾಖೆಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಂಡಿಲ್ಲ. ಮಾಲಡ್ಕದಲ್ಲಿ ಸೇತುವೆ ನಿರ್ಮಿಸಿಲ್ಲ, ಅರಮನೆಗಯಲ್ಲಿ ೧೦೦ಕ್ಕೂ ಹೆಚ್ಚು ಮನೆಗಳವರು ನಡೆದುಕೊಂಡು ಹೋಗುವಲ್ಲಿ ಸೇತುವೆ ಆಗಿಲ್ಲ, ಯಾವಟೆ ಕಟ್ಟಕೋಡಿ ಸಂಪರ್ಕ ರಸ್ತೆ ಕಾಂಕ್ರೀಟೀಕರಣ ಮತ್ತು ಮಂಜಿಕಾನ ಬದನೆಕಜೆ ಸಂಪರ್ಕ ರಸ್ತೆ ಅಭಿವೃದ್ಧಿ, ತಾಲೂಕು ಕಚೇರಿ ಮುಂಭಾಗ ಅಂಬ್ಡ್ಕೇರ್ ಪ್ರತಿಮೆ ನಿರ್ಮಾಣಕ್ಕೆ ಮನವಿ ಮಾಡಿದರು ಇದುವರೆಗೆ ಯಾವುದೇ ರೀತಿಯ ಸ್ಪಂದನೆ ಸಿಗಲಿಲ್ಲ. ಇವೆಲ್ಲವನ್ನು ಶೀಘ್ರದಲ್ಲಿ ಪರಿಹರಿಸಿಕೊಡುವಂತೆ ಆಗ್ರಹಿಸಿದರು.

ಮನವಿಯನ್ನು ಸ್ವೀಕರಿಸಿದ ತಹಶೀಲ್ದಾರ್ ತಾಲೂಕು ಆಡಳಿತದ ವ್ಯಾಪ್ತಿಯಲ್ಲಿ ಬರುವಂತಹ ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ನಾವು ಪ್ರಯತ್ನ ಪಡುತ್ತೇವೆ. ಮತ್ತು ಮೇಲಾಧಿಕಾರಿಗಳಿಗೆ ತಮ್ಮ ಬೇಡಿಕೆಗಳ ಬಗ್ಗೆ ಗಮನಕ್ಕೆ ನೀಡಲಾಗುವುದು ಎಂದು ಭರವಸೆಯನ್ನು ನೀಡಿದರು. ಅವರು ಮನವಿ ಸ್ವೀಕರಿಸಿದ ಬಳಿಕ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಸುಂದರ ಪಾಟಾಜೆ ತಹಶೀಲ್ದಾರರು ಇಲ್ಲಿಗೆ ಬಂದು ನಮ್ಮ ಬೇಡಿಕೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಅವರು ಶೀಘ್ರದಲ್ಲಿ ಸ್ಪಂದಿಸುವ ಭರವಸೆಯನ್ನು ನೀಡಿದ ಹಿನ್ನೆಲೆಯಲ್ಲಿ ಇಂದಿನ ಪ್ರತಿಭಟನೆಯನ್ನು ಇಲ್ಲಿಗೆ ಕೈ ಬಿಟ್ಟು , ಮುಂದಿನ ದಿನಗಳಲ್ಲಿ ನಮ್ಮ ಬೇಡಿಕೆಗಳು ಈಡೇರದೆ ಇದ್ದಲ್ಲಿ ಇದಕ್ಕಿಂತ ಹೆಚ್ಚಿನ ಕಾರ್ಯಕರ್ತರುಗಳನ್ನು ಸೇರಿಸಿ ಮತ್ತೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಹೇಳಿದರು.

Leave a Comment

Your email address will not be published. Required fields are marked *