ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸೆಕ್ಸ್‌ ಆಡಿಯೋ ಲೀಕ್| ಜಗತ್ತಿನ ಮುಂದೆ ಬೆತ್ತಲಾದ ಪಾಕಿಸ್ತಾನ

ಸಮಗ್ರ ನ್ಯೂಸ್: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹುದ್ದೆಯಿಂದ ಕೆಳಗಿಳಿದರೂ ಭಾರಿ ಸದ್ದು ಮಾಡುತ್ತಿದ್ದಾರೆ. ಪ್ರಧಾನಿಯಾಗಿ ವಿವಾದದಲ್ಲೇ ಮುಳುಗಿದ್ದ ಇಮ್ರಾನ್ ಖಾನ್ ಇತ್ತೀಚೆಗೆ ಸಾರ್ವಜನಿಕ ರ್ಯಾಲಿಯಲ್ಲಿ ಗುಂಡೇಟು ತಗುಲಿ ವಿಶ್ವದಾದ್ಯಂತ ಸುದ್ದಿಯಾಗಿದ್ದರು.

. Ad Widget . Ad Widget . Ad Widget

ಇದೀಗ ತೀವ್ರ ಮುಖಭಂಗಕ್ಕೆ ಒಳಗಾಗಿದ್ದಾರೆ. ಇಮ್ರಾನ್ ಖಾನ್ ಮಹಿಳೆ ಜೊತೆ ಸೆಕ್ಸ್ ಕುರಿತು ಮಾತನಾಡುವ ಆಡಿಯೋ ಕಾಲ್ ಲೀಕ್ ಆಗಿದೆ. ಈ ಆಡಿಯೋ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ ಅವರದ್ದು ಎನ್ನಲಾಗುತ್ತಿದೆ. ಈ ಆಡಿಯೋದಲ್ಲಿ ಇಮ್ರಾನ್ ಖಾನ್ ಈಗಲೇ ತನ್ನ ಬಳಿ ಬರುವಂತೆ ಮಹಿಳಗೆ ಬುಲಾವ್ ನೀಡಿದ್ದಾರೆ.

. Ad Widget .

ಇದಕ್ಕೆ ಪ್ರತಿಕ್ರಿಯಿಸಿರುವ ಮಹಿಳೆ, ಈಗಾಗಲೇ ನಿಮ್ಮ ನಡೆಯಿಂದ ನನ್ನ ಖಾಸಗಿ ಅಂಗಗಳಿಗೆ ನೋವಾಗಿದೆ. ಹೀಗಾಗಿ ಈಗ ಬರಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಆಡಿಯೋ ಇದೀಗ ಪಾಕಿಸ್ತಾನ ಮಾತ್ರವಲ್ಲ, ವಿಶ್ವದಲ್ಲೇ ಪಾಕಿಸ್ತಾನದ ಪ್ರಧಾನಿ ಕಚೇರಿಯಲ್ಲಿ ನಡೆಯುತ್ತಿರುವ ಅಸಲಿ ಆಟಗಳನ್ನು ಬೆತ್ತಲೆ ಮಾಡಿದೆ ಎಂದು ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇಮ್ರಾನ್ ಖಾನ್ ಅವರದ್ದು ಎನ್ನಲಾಗಿರುವ ಸೆಕ್ಸ್ ಕಾಲ್ ಆಡಿಯೋವನ್ನು ಪಾಕಿಸ್ತಾನದ ಪತ್ರಕರ್ತ ಸೈಯದ್ ಆಲಿ ಹೈದರ್ ಲೀಕ್ ಮಾಡಿದ್ದಾರೆ. ಯೂಟ್ಯೂಬ್ ಚಾನೆಲ್ ಮೂಲಕ ಈ ಆಡಿಯೋ ಬಹಿರಂಗ ಮಾಡಲಾಗಿದೆ. ಈ ಆಡಿಯೋದಲ್ಲಿ ಇಮ್ರಾನ್ ಖಾನ್, ಮಹಿಳೆಯೊಂದಿಗೆ ಸೆಕ್ಸ್ ಸಂಭಾಷಣೆ ನಡೆಸಿದ್ದಾರೆ.

Leave a Comment

Your email address will not be published. Required fields are marked *