ಮದುವೆಯಾಗುವುದಾಗಿ ನಂಬಿಸಿ ಸೆಕ್ಸ್|ಸಹೋದ್ಯೋಗಿಯನ್ನೇ ವಂಚಿಸಿದ ಡ್ರಗ್ಸ್ ಇನ್ಸ್‌ಪೆಕ್ಟರ್

ಸಮಗ್ರ ನ್ಯೂಸ್: ಸರ್ಕಾರಿ ಅಧಿಕಾರಿಯೋರ್ವ ತನ್ನದೇ ಇಲಾಖೆ ಮಹಿಳೆ ಅಧಿಕಾರಿಯನ್ನು ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿರುವ ಘಟನೆ ಆಂಧ್ರದಲ್ಲಿ ನಡೆದಿದೆ.ಇಲ್ಲಿನ ಕರ್ನೂಲ್​​ ಜಿಲ್ಲೆಯಲ್ಲಿ ಡ್ರಗ್​ ಇನ್ಸ್​ಪೆಕ್ಟರ್​ ಆಗಿ ಕೆಲಸ ಮಾಡುತ್ತಿರುವ ಅಬೀದ್​ ಅಲಿ ಎಂಬಾತ ತನ್ನ ಸಹೋದ್ಯೋಗಿ ಮಹಿಳೆಗೆ ವಂಚಿಸಿದ ಕಿಡಿಗೇಡಿ.

Ad Widget ... ..

ಇಬ್ಬರು ಒಂದೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಜತೆಗೆ ಒಂದೇ ಸಮುದಾಯಕ್ಕೆ ಸೇರಿದವರು ಕೂಡ. ಅಬೀದ್​ ಅಲಿ ತನಗೆ ಮದುವೆ ಆಗಿರುವ ವಿಷಯ ಬಚ್ಚಿಟ್ಟು ತನ್ನ ಇಲಾಖೆ ಮಹಿಳಾ ಅಧಿಕಾರಿ ಜತೆಗೆ ಲವ್ವಿ ಡವ್ವಿ ಆಡಿ ಬಿಕ್ಕಿಬಿದ್ದ ಘಟನೆ ಈಗ ಬೆಳಕಿಗೆ ಬಂದಿದೆ.

Ad Widget

ಮಹಿಳಾ ಅಧಿಕಾರಿ ಆತನ ಮೇಲೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಮದುವೆಯಾದ ವಿಚಾರ ಬಿಚ್ಚಿಟ್ಟು ತನ್ನನ್ನು ಪ್ರೀತಿಸಿದ. ಯಾವಾಗ ಮದುವೆ ವಿಚಾರ ನನಗೆ ಗೊತ್ತಾಯ್ತೋ, ಆಗ ತನ್ನ ಹೆಂಡತಿಗೆ ಡಿವೋರ್ಸ್​ ನೀಡುವುದಾಗಿ ಹೇಳಿದ. ಬಳಿಕ ನನ್ನನ್ನು ಮದುವೆ ಆಗುತ್ತೀನಿ ಎಂದಿದ್ದ. ಈಗ ಕೊಟ್ಟ ಮಾತಿನ ಮೇಲೆ ನಿಲ್ಲದೆ ಮೋಸ ಮಾಡಿದ್ದಾನೆ ಎಂದು ದೂರಿದ್ದಾರೆ. ಹಾಗೆಯೇ ಈ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​​ ಮಾಡಿ ವೈರಲ್​ ಮಾಡಿದ್ದಾರೆ. ಈ ಸಂಬಂಧ ಕರ್ನೂಲ್​ ಪೊಲೀಸರು ಕೇಸ್​ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

Leave a Comment

Your email address will not be published. Required fields are marked *