Ad Widget .

ಸುಳ್ಯ: ಸಮುದಾಯ ಆರೋಗ್ಯ ಕೇಂದ್ರದ‌ ರಸ್ತೆಗೆ ಚಿಕಿತ್ಸೆ ನೀಡುವವರಾರು?

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಿನಂಪ್ರತಿ ನೂರಾರು ರೋಗಿಗಳು ಭೇಟಿ ನೀಡುತ್ತಾರೆ. ಅನೇಕ ಹೊರ ರೋಗಿಗಳ ಸಹಿತ ಒಳರೋಗಿಗಳಾಗಿ ದಾಖಲಾಗುವವರ ಸಂಖ್ಯೆಯೂ‌ ಹೆಚ್ಚಿದೆ.‌ ಎಲ್ಲರಿಗೂ ಚಿಕಿತ್ಸೆ ನೀಡುವ ಈ ಆಸ್ಪತ್ರೆಯ ರಸ್ತೆಗೆ ಯಾರೂ ಚಿಕಿತ್ಸೆ ನೀಡುವವರಿಲ್ಲ ಎಂಬುದು ಖೇದಕರ ಸಂಗತಿ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಹಲವು ವರ್ಷಗಳಿಂದ ಈ ಆಸ್ಪತ್ರೆಗೆ ತೆರಳುವ ರಸ್ತೆ ನಾದುರಸ್ತಿಯಲ್ಲಿದೆ. ಹಲವು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅಟೋ ರಿಕ್ಷಾ, ಕಾರು, ಅಂಬ್ಯುಲೆನ್ಸ್ ಗಳು ಈ ರಸ್ತೆಯನ್ನೇರಿ ಆಸ್ಪತ್ರೆಗೆ ರೋಗಿಗಳನ್ನು ದಾಖಲಿಸಲು ಹರಸಾಹಸ ಪಡಬೇಕಿದೆ. ಅಂತಹ‌ ಗುಂಡಿಗಳು ಕೇವಲ 50 ಮೀಟರ್ ನಲ್ಲಿ ಬಿದ್ದಿವೆ.

Ad Widget . Ad Widget . Ad Widget .

ಸುಳ್ಯ ನಗರಕ್ಕೆ ಭೇಟಿ ‌ನೀಡುವ ಬಹುತೇಕ ನಾಗರೀಕರಿಗೆ ಈ ರಸ್ತೆಯ ಪರಿಚಯವಿದೆ. ಜನಪ್ರತಿನಿಧಿಗಳೂ ಈ ಸಮಸ್ಯೆಯನ್ನು ಗಮನಿಸಿದ್ದಾರೆ. ಆದರೆ ಯಾರೊಬ್ಬರೂ ಈ ಕುರಿತಂತೆ ಗಮನ ಹರಿಸದಿರುವುದು ದುರದೃಷ್ಟಕರ.

ಜನಸಾಮಾನ್ಯರಿಗೆ ದೊಡ್ಡಾಸ್ಪತ್ರೆಗಳಿಗೆ ದುಡ್ಡು ಕೊಟ್ಟು ಹೋಗಲು ದುಡ್ಡಿಲ್ಲ ಸ್ವಾಮಿ. ಇರುವ ಸರ್ಕಾರಿ ಆಸ್ಪತ್ರೆಯನ್ನು ಸುಸಜ್ಜಿತಗೊಳಿಸಿದ್ದೀರಿ. ಜೊತೆಗೆ ‌ಅದಕ್ಕೆ ಹೋಗುವ ರಸ್ತೆಯನ್ನು ದುರಸ್ತಿ ಮಾಡಿ ಪುಣ್ಯಕಟ್ಟಿಕೊಳ್ಳಿ…

ಶ್ರವಣ್, ಸುಳ್ಯ

Leave a Comment

Your email address will not be published. Required fields are marked *