ಬಿ.ಸಿ‌ರೋಡು: ಲಾರಿ ರಿಕ್ಷಾ ಅಪಘಾತ: ಮಹಿಳೆ ಗಂಭೀರ

ಸಮಗ್ರ ನ್ಯೂಸ್: ಲಾರಿ ರಿಕ್ಷಾ ಅಪಘಾತದ ಪರಿಣಾಮ ರಿಕ್ಷಾದಲ್ಲಿದ್ದ ಮಹಿಳೆ ಗಂಭೀರ ಗಾಯಗೊಂಡು, ಮಗು, ಚಾಲಕ ಸಹಿತ ಇನ್ನಿಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಬಿ.ಸಿ‌ರೋಡು ಸಮೀಪದ ಮೊಡಂಕಾಪು‌ವಿನಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

. Ad Widget . Ad Widget

ರಿಕ್ಷಾವನ್ನು ಅಶ್ರಫ್ ಎಂಬವರು ಚಲಾಯಿಸುತ್ತಿದ್ದು, ರಿಕ್ಷಾ ಪ್ರಯಾಣಿಕರನ್ನು ಕೈಕಂಬ ಕಡೆಯಿಂದ ಮೊಡಂಕಾಪು ಕಡೆಗೆ ಕರೆದೊಯ್ಯುತ್ತಿತ್ತು, ಈ ವೇಳೆ ಮೊಡಂಕಾಪು ಕಡೆಯಿಂದ ಬಂದ ಟಿಪ್ಪರ್ ಲಾರಿ, ಬಸ್ಸೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಿಂದ‌ ಬರುತ್ತಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದು, ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ರಿಕ್ಷಾ ನುಜ್ಜುಗುಜ್ಜಾಗಿದ್ದು, ರಿಕ್ಷಾದಲ್ಲಿದ್ದ ವೃದ್ಧ ಮಹಿಳೆ ಅವ್ವಮ್ಮ(70) ಗಂಭೀರ ಗಾಯಗೊಂಡಿದ್ದಾರೆ.

. Ad Widget . . Ad Widget . Ad Widget

ಉಳಿದಂತೆ ಇವರ ಸಂಬಂಧಿಕರಾದ 6 ವರ್ಷದ ಮಗು ‌ಹಾಗೂ ಇನ್ನಿಬ್ಬರು ಮಹಿಳೆಯರಿಗೆ ಹಾಗೂ ರಿಕ್ಷಾ ಚಾಲಕ ಅಶ್ರಫ್ ಗೂ ಗಾಯಗಳಾಗಿದೆ ಎ‌ಂದು ತಿಳಿದು ಬಂದಿದೆ. ಮೆಲ್ಕಾರ್ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

Leave a Comment

Your email address will not be published. Required fields are marked *