ಸ್ಯಾಂಡಲ್ ವುಡ್ ಹಾಸ್ಯನಟ ಗಂಡಸಿ ನಾಗರಾಜ್ ನಿಧನ

ಸಮಗ್ರ ನ್ಯೂಸ್: ಹಲವು ಪ್ರಮುಖ ಸಿನಿಮಾಗಳಲ್ಲಿ ನಟಿಸಿದ್ದ ಸ್ಯಾಂಡಲ್ ವುಡ್ ನ ಖ್ಯಾತ ಹಾಸ್ಯ ನಟ, ವಸ್ತ್ರಾಲಂಕಾರ ಕಲಾವಿದ ಗಂಡಸಿ ನಾಗರಾಜ್ ನಿನ್ನೆ ರಾತ್ರಿ ನಿಧನರಾಗಿದ್ದಾರೆ.

Ad Widget ... ..

ನವರಸ ನಾಯಕ ಜಗ್ಗೇಶ್ ಅವರ ಆಪ್ತ ವಸ್ತ್ರಾಲಂಕಾರ ಕಲಾವಿದರಾಗಿದ್ದ ಗಂಡಸಿ ನಾಗರಾಜ್ ಅವರು, ಸರ್ವರ್ ಸೋಮಣ್ಣ, ಸೂಪರ್ ನನ್ ಮಗ, ಬಂಡ ನನ್ನ ಗಂಡ, ಗುಂಡನ ಮದುವೆ, ರಾಯರ ಮಗ, ಹಬ್ಬ, ಶ್ರೀ ಮಂಜುನಾಥ, ರಾಜಾಹುಲಿ, ಪರ್ವ, ಮಾತಾಡು ಮಾತಾಡ್ ಮಲ್ಲಿಗೆ, ಕೋಟಿಗೊಬ್ಬ-3 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.

Ad Widget

ಕೆಲಕಾಲದಿಂದ ಅಸೌಖ್ಯಕ್ಕೊಳಗಾಗಿದ್ದ ಅವರು ಭಾನುವಾರ ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ.

Leave a Comment

Your email address will not be published. Required fields are marked *