ಬೆಳ್ತಂಗಡಿ ಟಿಕೇಟ್ ಬಹುತೇಕ ರಕ್ಷಿತ್ ಗೆ ಫಿಕ್ಸ್| KPCCಯಿಂದ ಯುವ ನಾಯಕನಿಗೆ ಬುಲಾವ್

ಸಮಗ್ರ ನ್ಯೂಸ್: 2023 ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಹೊಸ ಮುಖಗಳನ್ನು ಅಭ್ಯರ್ಥಿಗಳಾಗಿ ಕಣಕ್ಕೆ ಇಳಿಸುತ್ತಿದ್ದು ಈದೀಗ ಬೆಳ್ತಂಗಡಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಕ್ಷಿತ್ ಶಿವರಾಂ ಅವರನ್ನು ಅಂತಿಮ ಮಾಡಿ ಕೆಪಿಸಿಸಿ ಕಚೇರಿಯಿಂದ ಬುಲಾವ್ ನೀಡಿದೆ.

Ad Widget ... ..

ಬೆಸ್ಟ್ ಫೌಂಡೇಶನ್ ಮೂಲಕ ಬೆಳ್ತಂಗಡಿ ತಾಲೂಕಿನಲ್ಲಿ ಸಮಾಜ ಸೇವೆ ಮಾಡುತ್ತಿರುವ ಯುವ ನಾಯಕ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ರಕ್ಷಿತ್ ಶಿವರಾಂ ಅವರಿಗೆ ಕೆಪಿಸಿಸಿ ಯಿಂದ 2023 ರ ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಗೆ ತಯಾರಿ ಮಾಡಿ ತಾಲೂಕಿನಲ್ಲಿ ಕ್ಯಾಂಪೇನ್ ಆರಂಭಿಸಬೇಕೆಂದು ಕರೆ ಬಂದಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿದೆ.

Ad Widget

ಒಟ್ಟಾರೆಯಾಗಿ ಬೆಳ್ತಂಗಡಿಯಲ್ಲಿ ಬಿಜೆಪಿಯಿಂದ ಹರೀಶ್ ಪೂಂಜಾರಿಗೆ ಟಿಕೆಟ್ ಪಕ್ಕಾ ಆಗಿದ್ದು, ಕಾಂಗ್ರೆಸ್ ನಿಂದ ರಕ್ಷಿತ್ ಶಿವರಾಂ ಗೆ ಟಿಕೆಟ್ ಸಿಕ್ಕಿದರೆ ಜಿದ್ದಾಜಿದ್ದಿ ಫೈಟ್ ಆಗುವ ಸಾಧ್ಯತೆ ಇದೆ.

Leave a Comment

Your email address will not be published. Required fields are marked *