ಆಸ್ಪತ್ರೆಯ ಸ್ಕ್ಯಾನಿಂಗ್ ರೂಂನಲ್ಲಿ ಬಟ್ಟೆ ಬದಲಿಸುವಾಗ ಜೋಕೆ..|ಮಂಗಳೂರಲ್ಲಿ ಸಿಕ್ಕಿ ಬಿದ್ದ ”ಸ್ಕ್ಯಾನಿಂಗ್ ‌” ಕಾಮುಕ

ಸಮಗ್ರ ನ್ಯೂಸ್: ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಮಹಿಳೆಯರು ಬಟ್ಟೆ ಬದಲಾಯಿಸುವ ಕೊಠಡಿಯಲ್ಲಿ ರಹಸ್ಯ ಕ್ಯಾಮೆರಾವನ್ನು ರೆಕಾರ್ಡಿಂಗ್ ನಲ್ಲಿ ಇರಿಸಿದ್ದ ಘಟನೆ ಸುರತ್ಕಲ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಬೆಳಕಿಗೆ ಬಂದಿದೆ.

Ad Widget ... ..

ನರ್ಸಿಂಗ್‌ ವಿದ್ಯಾರ್ಥಿಯಾದ ಪವನ್ ಕುಮಾರ್(21) ಎಂಬಾತ ಈ ಕೃತ್ಯವೆಸಗಿದವನು. ಈತ ಮೂಲತಃ ಕಲಬುರಗಿಯವನಾಗಿದ್ದು ಬಜಪೆಯಲ್ಲಿ ವಾಸವಾಗಿದ್ದ.

Ad Widget

ಆಸ್ಪತ್ರೆಗೆ ಚಿಕಿತ್ಸೆಗೆ, ತಪಾಸಣೆಗೆ ಹೋಗುವವರು ಸ್ಯಾನಿಂಗ್‌ಗೆ ಒಳಗಾಗುವ ಮೊದಲು ತಮ್ಮ ಬಟ್ಟೆ ಬದಲಾಯಿಸಬೇಕು. ಇದು ತಿಳಿದಿರುವ ಆರೋಪಿ ಪವನ್ ಮಹಿಳೆಯರು ಬಟ್ಟೆ ಬದಲಾಯಿಸುವ ಕೋಣೆಯಲ್ಲಿ ರಹಸ್ಯವಾಗಿ ಕ್ಯಾಮೆರಾ ಇರಿಸಿ, ಮಹಿಳೆಯರು ಬಟ್ಟೆ ಬದಲಾಯಿಸುವ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದ ಎನ್ನಲಾಗಿದೆ.

ಈ ಬಾರಿ ಆಸ್ಪತ್ರೆಗೆ ಸ್ಯಾನಿಂಗ್‌ಗೆಂದು ಬಂದಿದ್ದ ಯುವತಿಯೊಬ್ಬರು ಬಟ್ಟೆ ಬದಲಾಯಿಸಲು ಆ ಕೋಣೆಗೆ ತೆರಳಿದ್ದಾರೆ. ಈ ವೇಳೆ ಕೋಣೆಯ ಮೂಲೆಯಲ್ಲಿ ರಹಸ್ಯ ಕ್ಯಾಮೆರಾ ಇರುವುದು ಪತ್ತೆಯಾಗಿದೆ.

ಕ್ಯಾಮೆರಾ ನೋಡಿ ಯುವತಿ ಬೆಚ್ಚಿಬಿದ್ದಿದ್ದಾರೆ. ನಂತರ ಅವರು ಈ ವಿಷಯವನ್ನು ವೈದ್ಯರಿಗೆ ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿದಾಗ ಪವನ್ ಕುಮಾರ್‌ ಕ್ಯಾಮೆರಾ ಇಟ್ಟಿರುವುದೆಂದು ತಿಳಿದು ಬಂದಿದೆ.

ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ಜಾಮೀನು ನೀಡಿದೆ ಎಂದು ತಿಳಿದು ಬಂದಿದೆ. ಇನ್ನೂ ಆರೋಪಿಯ ಮೊಬೈಲನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

Leave a Comment

Your email address will not be published. Required fields are marked *