ಸುರತ್ಕಲ್ : ಆತಂಕಕ್ಕೆ ಕಾರಣವಾದ ಮಗು ಅಪಹರಣ ಯತ್ನ ಪ್ರಕರಣ!

ಸಮಗ್ರ ನ್ಯೂಸ್: ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಎಂಬಲ್ಲಿ ಮನೆಯ ಮುಂದೆ ನಿಂತಿದ್ದ ಮಗುವನ್ನು ಅಪಹರಿಸಲು ಯತ್ನಿಸಿದ ಘಟನೆ ನಿನ್ನೆ ರಾತ್ರಿ ನಡೆದಿದ್ದು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Ad Widget ... ..

ನಿನ್ನೆ ರಾತ್ರಿ ಪರಿಸರದಲ್ಲಿ ವಿದ್ಯುತ್ ಕಡಿತಗೊಂಡಿದ್ದು ಈ ವೇಳೆ ಚೊಕ್ಕಬೆಟ್ಟು ಮಸೀದಿ ಪಕ್ಕದ ಮನೆಯ ಮುಂದೆ ಮಗು ಆಟವಾಡುತ್ತಿತ್ತು. ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿ ಮಗುವಿನ ಕೈ ಹಿಡಿದು ಎಳೆದು ಅಪಹರಣಕ್ಕೆ ಯತ್ನಿಸಿದ್ದು ಮಗು ಆತನ‌ ಕೈಯಿಂದ ತಪ್ಪಿಸಿಕೊಂಡು ಮನೆಗೆ ಓಡಿ ಹೋಗಿರುವುದು ಸಿಸಿ ಕೆಮರಾದಲ್ಲಿ ದಾಖಲಾಗಿದೆ.
ಸ್ಥಳಕ್ಕೆ ಸುರತ್ಕಲ್‌ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Ad Widget

Leave a Comment

Your email address will not be published. Required fields are marked *