ಕಾರಿನಲ್ಲಿ ಲಿಕ್ಕರ್ ಬಾಟಲಿ ಸಾಗಿಸಿದ ಬಿಜೆಪಿ ಜಿಲ್ಲಾಧ್ಯಕ್ಷ| ಪ್ರಕರಣ ದಾಖಲಿಸಿದ ಚುನಾವಣಾ ಆಯೋಗ

ಸಮಗ್ರ ನ್ಯೂಸ್: ಗುಜರಾತ್ ವಿಧಾನಸಭೆ ಚುನಾವಣೆಯ ಅಂತಿಮ ಹಂತದ ಮತದಾನ ನಡೆಯುತ್ತಿದೆ. ಈ ನಡುವೆ ಗುಜರಾತ್‌ನ ಅರಾವಳಿ ಜಿಲ್ಲೆಯ ಬಿಜೆಪಿ ಅಧ್ಯಕ್ಷರ ವರ್ತನೆ ಬಗ್ಗೆ ಟೀಕೆಗಳು ಬರುತ್ತಿವೆ. ಅರವಳಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮದ್ಯದ ಬಾಟಲಿಗಳನ್ನು ಮುಕ್ತವಾಗಿ ಸಾಗಿಸುತ್ತಿರುವ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

Ad Widget ... ..

ಅರಾವಳಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಹಿರಂಗವಾಗಿ ಮದ್ಯದ ಪೆಟ್ಟಿಗೆಗಳನ್ನು ಒಯ್ಯುತ್ತಿದ್ದಾರೆ ಎಂದು ದೀಪಕ್ ಖತ್ರಿ ಎನ್ನುವವರು ಟ್ವಿಟ್ಟರ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ತಮ್ಮ ಟ್ವೀಟ್​ನಲ್ಲಿ ‘ಗುಜರಾತ್​ನ ಅರಾವಳಿ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ಬಹಿರಂಗವಾಗಿ ಮದ್ಯದ ಬಾಕ್ಸ್​ಗಳನ್ನು ಹೊತ್ತೊಯ್ಯುತ್ತಿದ್ದಾರೆ. ಬಿಜೆಪಿಯವರು ಮದ್ಯ ಹಂಚುತ್ತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಮೌನವಾಗಿದೆ. ಈ ಬಗ್ಗೆ ಚುನಾವಣಾ ಆಯೋಗ ಏನಾದರೂ ವಿವರಣೆ ನೀಡುವುದೇ’ ಎಂದು ದೀಪಕ್​ ಖತ್ರಿ ಬರೆದಿದ್ದಾರೆ.

Ad Widget

ಈ ಬಗ್ಗೆ ಚುನಾವಣಾ ಆಯೋಗ ‘ನಿಷೇಧಾಜ್ಞೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅರಾವಳಿ ಜಿಲ್ಲೆಯ ಎಸ್‌ಪಿ ಪ್ರಕಾರ ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿದ್ದಾರೆ. ಮಾಲ್‌ಪುರ ಪಿಎಸ್‌ಸಿಆರ್ ನಂ 6220/2022 ರ ಪ್ರಕಾರ ಗುಜ್ ಪ್ರೋಹಿಬಿಷನ್​ ಆಯಕ್ಟ್, 1949 ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.

Leave a Comment

Your email address will not be published. Required fields are marked *