ಈ ಕುಟುಂಬ ಮದುವೆ ದಿಬ್ಬಣ ಹೊರಟಿದ್ದು ಯಾವುದರಲ್ಲಿ ಗೊತ್ತಾ?

ಸಮಗ್ರ ನ್ಯೂಸ್: ಬಸ್ಸು, ಕಾರು, ರೈಲಿನಲ್ಲೆಲ್ಲಾ ಸಂಬಂಧಿಕರು ಒಟ್ಟಾಗಿ ಮದುವೆ ದಿಬ್ಬಣ ಹೋಗುವುದನ್ನು ಕಂಡಿದ್ದೇವೆ. ಆದರೆ ಇದೀಗ ಇಲ್ಲೊಂದು ಕುಟುಂಬ ವಿಮಾನವೊಂದನ್ನು ಬುಕ್ ಮಾಡಿ, ಮದುವೆ ದಿಬ್ಬಣ ಹೊರಟಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Ad Widget ... ..

ಮದುವೆ ದಿಬ್ಬಣದಲ್ಲಿ ಸಂಭ್ರಮ, ಸಡಗರ ತುಂಬಿರುತ್ತದೆ. ಹಾಡುತ್ತಾ, ನಲಿಯುತ್ತಾ ಸಾಗುವುದೇ ಸೋಜಿಗ. ಕುಟುಂಬ ಸದಸ್ಯರೊಂದಿಗೆ ಮದುವೆ ದಿಬ್ಬಣ ಹೋಗುವುದು ಸದಾ ಕಾಲ ನೆನಪಿನಲ್ಲಿ ಉಳಿಯುವಂತಹ ಸಂಭ್ರಮ.

Ad Widget

ಶ್ರೇಯಾ ಶಾ ಎಂಬ ಇನ್ಸ್​ಟಾಗ್ರಾಂ ಬಳಕೆದಾರರೊಬ್ಬರು ಹಂಚಿಕೊಂಡಿರುವ ವಿಡಿಯೋದಲ್ಲಿ ವಿಮಾನದ ಮೂಲಕ ಮದುವೆ ದಿಬ್ಬಣ ಹೋಗಿರುವುದನ್ನು ಕಾಣಬಹುದು. ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಸಹೋದರಿಯ ಮದುವೆಗೆ ತೆರಳಲು ವಿಶೇಷ ವಿಮಾನವೊಂದನ್ನು ಬುಕ್ ಮಾಡಿದ್ದೇವೆ. ನಾವೆಲ್ಲರೂ ಸಂತಸದಿಂದ ಒಟ್ಟಾಗಿ ಮದುವೆಗೆ ತೆರಳುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇನ್ಸ್​​ಟಾಗ್ರಾಂನಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಒಂದು ಕೋಟಿಗೂ ಅಧಿಕ ಜನರು ವೀಕ್ಷಿಸಿದ್ದಾರೆ.

Leave a Comment

Your email address will not be published. Required fields are marked *