ಪುತ್ತೂರು: ಮನೆ ಮುಂದೆ ಮಹಿಳೆಯ ಸುಟ್ಟ ದೇಹ ಪತ್ತೆ

ಸಮಗ್ರ ನ್ಯೂಸ್: ಮಹಿಳೆಯೋರ್ವರ ದೇಹ
ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನ.26ರ ಪುತ್ತೂರಿನ ಕುಂಬ್ರ ಎಂಬಲ್ಲಿ ನಡೆದಿದೆ.

Ad Widget ... ..

ಮೃತ ಮಹಿಳೆಯನ್ನು ನಬೀಸ ಎಂದು ಗುರುತಿಸಲಾಗಿದೆ. ನಬೀಸ ಎಂದಿನಂತೆ ರಾತ್ರಿ ಮನೆಯಲ್ಲಿ ಊಟ ಮುಗಿಸಿ ಮಲಗಿದ್ದು, ಬೆಳಿಗ್ಗೆ ಮನೆಯ ಮುಂಬಾಗದಲ್ಲಿ ಇವರು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

Ad Widget

ನಬೀಸ ಅವರೇ ಬೆಂಕಿ ಹಚ್ಚಿಕೊಂಡರೇ ಅಥವಾ ಆಕಸ್ಮಿಕವಾಗಿ ಬೆಂಕಿ ತಗುಲಿತ್ತೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ನಬೀಸ ಅವರು ಅಲ್ಪ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಸಂಪ್ಯ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಮೃತರು ಪತಿ ಇಬ್ರಾಹಿಂ ಹಾಗೂ ಮಕ್ಕಳನ್ನು ಅಗಲಿದ್ದಾರೆ.

Leave a Comment

Your email address will not be published. Required fields are marked *