Ad Widget .

ನನ್ ಮಗ ಕಾರು,‌ಬೈಕ್ ರೈಡ್ ಮಾಡ್ತಾನೆ ಅಂತ ಜಂಬ ಪಡ್ತೀರಾ? ಅಪ್ರಾಪ್ತನಿಗೆ ಕಾರು ಚಲಾಯಿಸಲು ಕೊಟ್ಟು ಏನಾಗಿದೆ ಗೊತ್ತಾ?

ಸಮಗ್ರ ನ್ಯೂಸ್: ನಿಮ್ಮ ಅಪ್ರಾಪ್ತ ಮಕ್ಕಳಿಗೆ ವಾಹನ ಚಲಾಯಿಸಲು ಕೊಡುವ ಮೊದಲು ಅಂತಹ ಪಾಲಕರು ಈ ಸ್ಟೋರಿ ಓದ್ಲೇಬೇಕು. ಮಕ್ಕಳು ಕಾರು, ಬೈಕ್ ಓಡಿಸ್ತಾರೆ ಅಂತ ಅವರಿಗೆ ಗಾಡಿ ಕೊಡುವ ಮುನ್ನ ಈ ವಿಷಯ ಸರಿಯಾಗಿ‌ ತಿಳ್ಕೊಳ್ಳಿ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ತಮ್ಮ ಅಪ್ರಾಪ್ತ ‌ಪುತ್ರನಿಗೆ ವಾಹನ ಚಲಾಯಿಸಲು ನೀಡಿದ ತಪ್ಪಿಗೆ ವಾಹನ ಮಾಲಿಕನಿಗೆ ನ್ಯಾಯಾಲಯ ಬರೊಬ್ಬರಿ 20 ಸಾವಿರ ದಂಡ ವಿಧಿಸಿದ ಘಟನೆ ಕಡಬ ತಾಲ್ಲೂಕಿನಲ್ಲಿ ನಡೆದಿದೆ.

Ad Widget . Ad Widget . Ad Widget .

ಕೊಯಿಲ ಗ್ರಾಮದ ಕೆ.ಸಿ.ಫಾರ್ಮ್ ನಿವಾಸಿ ಅಬ್ದುಲ್ ರಹಿಮಾನ್ ಎಂಬವರು ದಂಡ ಪಾವತಿಸಿದ ವ್ಯಕ್ತಿ.
2020ನೇ ಇಸವಿಯಲ್ಲಿ ಕೊಯಿಲದಲ್ಲಿ ಅಬ್ದುಲ್ ರಹಿಮಾನ್ ಎಂಬವರು ತನ್ನ ಅಪ್ರಾಪ್ತ ಮಗನಿಗೆ ಬೈಕ್ ಚಲಾಯಿಸಲು ನೀಡಿದ್ದು, ಆ ಬೈಕ್ ಅಪಘಾತವಾಗಿ ಅಪ್ರಾಪ್ತ ಬಾಲಕನ ವಿರುದ್ದ ಕಡಬ ಠಾಣೆಯಲ್ಲಿ ಕೇಸು ದಾಖಲಾಗಿತ್ತು.

ಈ ಪ್ರಕರಣದ ಬಗ್ಗೆ ಪುತ್ತೂರು ಎ.ಸಿ.ಜೆ. ಜೆ.ಎಮ್.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಯೋಗೀಂದ್ರ ಶೆಟ್ಟಿಯವರು ತೀರ್ಪು ನೀಡಿ, ಅಪ್ರಾಪ್ತ ಬಾಲಕನಿಗೆ ವಾಹನ ಚಲಾಯಿಸಲು ನೀಡಿದ್ದ ವಾಹನ ಮಾಲಿಕನಿಗೆ 20 ಸಾವಿರ ದಂಡ ಪಾವತಿಸುವಂತೆ ಆದೇಶ ನೀಡಿದ್ದಾರೆ. ಒಟ್ಟಾರೆ ಇನ್ನಾದ್ರೂ ಲೈಸೆನ್ಸ್ ಹೊಂದಿರುವ ಚಾಲಕರು ಮಾತ್ರ ವಾಹನ ಚಲಾಯಿಸುವುದು ಸೂಕ್ತ. ಇಲ್ಲಾಂದ್ರೆ ಹೀಗೆ ಬರೋಬರಿ ದಂಡ ಪಾವತಿಸುವುದರ ಜೊತೆಗೆ ಅನಾಹುತಗಳನ್ನೂ ಎದುರು ಹಾಕಿಕೊಳ್ಳುವ ಸಾಧ್ಯತೆ ಇದೆ.

Leave a Comment

Your email address will not be published. Required fields are marked *