ನನಗೆ ಬಹಳ ವರ್ಷ ಬದುಕುವ ಆಸೆ….ಆದರೆ?|ಬದುಕುವ ಬಗ್ಗೆ ಸಿದ್ದು ಹೇಳಿದ್ದೇನು

ಸಮಗ್ರ ನ್ಯೂಸ್: ನನಗೆ ಬಹಳ ವರ್ಷ ಬದುಕುವ ಆಸೆ. ಜನ ಸೇವೆಗಾಗಿ ನಾನು ಹೆಚ್ಚು ವರ್ಷ ಬದುಕಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವೇದಿಕೆ ಮೇಲೆ ಹೇಳಿದ್ದಾರೆ.

Ad Widget ... ..

ಡಾ. ಕರುಣಾಕರ ನಾಗರಾಜೇಗೌಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯನವರು, ನನಗೆ ಈಗ 76 ವರ್ಷ.

Ad Widget

ಡಯಾಬಿಟಿಕ್​​ನಿಂದ 10 ವರ್ಷ ಆಯಸ್ಸು ಕಡಿಮೆ ಆಗಿದೆ. ಎಷ್ಟು ವರ್ಷ ಬದುಕುತ್ತೇನೋ ಗೊತ್ತಿಲ್ಲ. ಆದರೆ ಜಾಸ್ತಿ ವರ್ಷ ಬದುಕುವ ಆಸೆ ಇದೆ. ಎಲ್ಲರೂ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಬೇಕು. ರೋಗಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಚಿಕ್ಕ ವಯಸ್ಸಿನಲ್ಲಿ ಇವೆಲ್ಲ ಶುರು ಮಾಡಬೇಕು.

ಆಸ್ಪತ್ರೆ ನಡೆಸುವವರಿಗೆ ಕೊರೊನಾ ಬಂದ ಮೇಲೆ ಅನುಕೂಲವಾಯ್ತು. ಕೆಲವರು ಆಸ್ಪತ್ರೆ ಮಾಡಲು ಹೊರಟಿದ್ದರು. ಆದರೆ ಕೋವಿಡ್ ಬಂದ ಮೇಲೆ ಆಸ್ಪತ್ರೆಗಳಿಗೆ ಹೆಚ್ಚು ಲಾಭವಾಗಿದೆ. ಕೋವಿಡ್​ನಿಂದ ಜನರಿಗೆ ತೊಂದರೆ ಆಯ್ತು. ಖಾಸಗಿ ಆಸ್ಪತ್ರೆ ಅವರಿಗೆ ಅನುಕೂಲವಾಯ್ತು ಎಂದರು.

Leave a Comment

Your email address will not be published. Required fields are marked *