ಮಂಗಳೂರಲ್ಲಿ ನೈತಿಕ ಪೊಲೀಸ್ ಗಿರಿ! ಶಾಲಾ ವಿದ್ಯಾರ್ಥಿಗೆ ಥಳಿಸಿದ ಬುರ್ಖಾಧಾರಿ ಮಹಿಳೆ ಮತ್ತು ಯುವಕ!!

ಸಮಗ್ರ ನ್ಯೂಸ್: ಅಪ್ರಾಪ್ತ ಶಾಲಾ ಬಾಲಕನ ಮೇಲೆ ಬಸ್ ನಿಲ್ದಾಣದಲ್ಲಿ ನೂರಾರು ಮಂದಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಬುರ್ಖಾಧಾರಿ ಮಹಿಳೆ ಹಾಗೂ ಯುವಕನೋರ್ವ ಮನಬಂದಂತೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Ad Widget ... ..

ಈ ವಿಡಿಯೋ ನೋಡಿದ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದು ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ ಮಾಡುತ್ತಿರುವುದೇಕೆ ಎನ್ನುವುದು ಬಯಲಾಗಿಲ್ಲ. ಪೊಲೀಸ್ ಇಲಾಖೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸದಿದ್ದಲ್ಲಿ ನೈತಿಕ ಪೊಲೀಸ್ ಗಿರಿ ನಿಯಂತ್ರಿಸುವುದು ಕಷ್ಟ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Ad Widget

ಮಂಗಳೂರು ಹೊರವಲಯದ ಅಧ್ಯಾರ್ ಕಟ್ಟೆ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದ್ದು ಮಧ್ಯವಯಸ್ಕ ಬುರ್ಖಾಧಾರಿ ಮಹಿಳೆ ಹಾಗೂ ಯುವಕ ಫಾರ್ಚುನರ್ ಕಾರ್ ನಲ್ಲಿ ಬಂದು ಹಲ್ಲೆ ನಡೆಸುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.
ವೈರಲ್ ವಿಡಿಯೋ ಹಿನ್ನೆಲೆಯೇನು ಎನ್ನುವುದು ಪೊಲೀಸ್ ತನಿಖೆಯಿಂದ ಬಯಲಾಗಬೇಕಿದೆ.

Leave a Comment

Your email address will not be published. Required fields are marked *