Ad Widget .

ರಾಜ್ಯಪಾಲರ ವಿರುದ್ದವೇ ಸುಗ್ರಿವಾಜ್ಞೆ ಹೊರಡಿಸಿದ ಕೇರಳ‌ ಸರ್ಕಾರ| ವಿವಿ ಗಳ ಕುಲಪತಿ ಹುದ್ದೆಯಿಂದ ಕೆಳಗಿಳಿಸಲು ನಿರ್ಣಯ

ಸಮಗ್ರ ನ್ಯೂಸ್: ಕೇರಳ ಸರ್ಕಾರ ಮತ್ತು ಅಲ್ಲಿನ ರಾಜ್ಯಪಾಲರ ನಡುವಿನ ರಾಜಕೀಯ ಬಿಕ್ಕಟ್ಟು ಮತ್ತೊಂದು ಹಂತಕ್ಕೆ ತಲುಪಿದೆ. ಗವರ್ನರ್‌ ಆರಿಫ್‌ ಮೊಹಮ್ಮದ್‌ ಖಾನ್‌ರನ್ನ ವಿವಿಗಳ ಕುಲಪತಿ ಹುದ್ದೆಯಿಂದ ಕೆಳಗಿಳಿಸಲು ಕೇರಳ ಸರ್ಕಾರ ಮುಂದಾಗಿದೆ. ಈ ಸಂಬಂಧ ಸುಗ್ರೀವಾಜ್ಞೆ ಅಥವಾ ವಿಶೇಷ ಆಜ್ಞೆ ಹೊರಡಿಸಲು ಅಲ್ಲಿನ ಸಿಎಂ ಪಿಣರಾಯಿ ವಿಜಯನ್‌ ಸಂಪುಟ ಮತ ಹಾಕಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಇತ್ತೀಚೆಗೆ 9 ವಿವಿಗಳ ಉಪಕುಲಪತಿಗಳಿಗೆ ರಾಜಿನಾಮೆ ನೀಡೋಕೆ ಗವರ್ನರ್‌ ಖಾನ್‌ ಹೇಳಿದರು. ಈ ಆದೇಶವನ್ನು ಪ್ರಶ್ನಿಸಿ ಎಲ್ಲಾ ಉಪಕುಲಪತಿಗಳು ಹೈಕೋರ್ಟ್‌ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರ ಬದಲಿಗೆ ಪರಿಣಿತ ಶಿಕ್ಷಣ ತಜ್ಞರನ್ನ ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿಯನ್ನಾಗಿ ಮಾಡಲು ಸರ್ಕಾರ ಮುಂದಾಗಿದೆ ಅಂತ ಕೇರಳ ಶಿಕ್ಷಣ ಸಚಿವರು ಹೇಳಿದ್ದಾರೆ.

Ad Widget . Ad Widget . Ad Widget .

ಇತ್ತ ರಾಜ್ಯಪಾಲ ಆರ್‌.ಎನ್‌ ರವಿಯವರನ್ನ ವಜಾಗೊಳಿಸಿ ಅಂತ ತಮಿಳುನಾಡು ಸರ್ಕಾರ ರಾಷ್ಟ್ರಪತಿಗೆ ಮನವಿ ಸಲ್ಲಿಸಿದೆ. ರಾಜ್ಯಪಾಲರಿಂದ ಶಾಂತಿಗೆ ಅಪಾಯವಿದ್ದು, ಅವರು ಕೋಮು ದ್ವೇಷವನ್ನು ಪ್ರಚೋದಿಸುತ್ತಾರೆ. ಚುನಾಯಿತ ಸರ್ಕಾರಕ್ಕೆ ಜನರ ಸೇವೆ ಮಾಡುವುದಕ್ಕೆ ಅಡ್ಡಿಪಡಿಸಿದ್ದಾರೆ ಹಾಗಾಗಿ ಅವರನ್ನು ಕೂಡಲೇ ಪದಚ್ಯುತಿಗೊಳಿಸಿ ಅಂತ ಇಲ್ಲಿನ ಸರ್ಕಾರ ಮನವಿ ಸಲ್ಲಿಸಿದೆ.

Leave a Comment

Your email address will not be published. Required fields are marked *