ಸಮಗ್ರ ನ್ಯೂಸ್: ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿದ್ದು, ಇಂಡಿಗೋ ವಿಮಾನದ ಪೈಲಟ್ ನ ಸಮಯಪ್ರಜ್ಞೆಯಿಂದ ಪ್ರಯಾಣಿಕರ ಪ್ರಾಣ ಉಳಿದಿದೆ.
ದೆಹಲಿಯಿಂದ ಬೆಂಗಳೂರಿಗೆ ಹೊರಟ್ಟಿದ ಇಂಡಿಗೋ ವಿಮಾನದ ಇಂಜಿನ್ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿತ್ತು. ಆದರೆ ಪೈಲೆಟ್ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ.
ಕಳೆದ ರಾತ್ರಿ ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ 6E-2131 ನಂಬರಿನ ಇಂಡಿಗೋ ವಿಮಾನ ಟೇಕಾಫ್ ಆಗುತ್ತಿತ್ತು. ಆದರೆ ಟೇಕಾಫ್ ಆಗುತ್ತಿದ್ದಂತೆ ವಿಮಾನದ ಬಲಭಾಗದ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ದಿಢೀರ್ ಬೆಂಕಿ ಕಾಣಿಸಿಕೊಳ್ತಿದ್ದಂತೆ ಪೈಲೆಟ್ ತಕ್ಷಣವೇ ವಿಮಾನವನ್ನ ದೆಹಲಿ ವಿಮಾನ ನಿಲ್ದಾಣದಲ್ಲೇ ಲ್ಯಾಂಡ್ ಮಾಡಿದ್ದಾರೆ.
ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಈ ಭಯಾನಕ ದೃಶ್ಯವನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ವೀಡಿಯೋದಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದ್ದು, ಎಂಜಿನ್ನಲ್ಲಿ ದಟ್ಟವಾದ ಬೆಂಕಿಯ ಕಿಡಿ ಚಿಮ್ಮುತ್ತಿರುವುದು ಕಂಡುಬಂದಿದೆ.