Ad Widget .

ವಿಜ್ಞಾನಿಗಳಿಂದ ಹೊಸ‌ ಮಾದರಿಯ ವೈರಸ್ ಅಭಿವೃದ್ಧಿ! ಮತ್ತೊಂದು ಮಹಾ ಮಾರಣಹೋಮಕ್ಕೆ ಸಾಕ್ಷಿಯಾಗಲಿದ್ಯಾ ಜಗತ್ತು? 80% ಹೆಚ್ಚು ಮರಣ ಪ್ರಮಾಣದ ತಾಕತ್ತು ಹೊಂದಿದೆ ಈ ತಳಿ!!

ಸಮಗ್ರ ನ್ಯೂಸ್: ಕೊರೋನಾ, ಓಮಿಕ್ರಾನ್‌, ಅದರ ರೂಪಾಂತರಿಗಳ ಹಾವಳಿ ಮಧ್ಯದಲ್ಲಿಯೇ ಕೋವಿಡ್ ರೂಪಾಂತರಗಳಾದ BF.7 ಮತ್ತು BA.5.1.7 ಹೆಚ್ಚಿನ ಹರಡುವಿಕೆಯೊಂದಿಗೆ ಸಾಂಕ್ರಾಮಿಕ ರೋಗದ ಭೀತಿಯನ್ನು ದುಪ್ಪಟ್ಟು ಮಾಡಿದೆ. ಈ ಎಲ್ಲಾ ಆತಂಕಗಳ ನಡುವೆ ಕೋವಿಡ್‌ ವೈರಸ್‌ ಅನ್ನೇ ಹೋಲುವ, ಅದರ ಗುಣಲಕ್ಷಣಗಳನ್ನು ಹಂಚಿಕೊಳ್ಳುವ, ಅದೇ ತರನಾದ ಜೀವಿಗಳ ನಿರ್ದಿಷ್ಟ ವೈರಸ್‌ ರೂಪಾಂತರದ ಹೊಸ ಸಂಶೋಧನೆ ಮತ್ತಷ್ಟು ಆತಂಕವನ್ನು ಸೃಷ್ಟಿ ಮಾಡಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಪ್ರಸ್ತುತ ಇದೇ ರೀತಿಯಾದ ಒಂದು ಸಂಶೋಧನೆ ನಡೆದಿದ್ದು, ಕೊರೋನಾ ಮತ್ತು ಓಮಿಕ್ರಾನ್‌ ವೈರಸ್‌ಗಳ ರೂಪಾಂತರವನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ವೈದ್ಯಕೀಯ ಮಾಹಿತಿ ಲಭಿಸಿದೆ.

Ad Widget . Ad Widget . Ad Widget .

ಮೊದಲಿಗೆ ಕೊರೋನಾ ವೈರಸ್ ಇಡೀ ಜಗತ್ತನ್ನೇ ಅಲ್ಲಾಡಿಸಿದ ಬಳಿಕ ಅದರ ಉಗಮ ಸ್ಥಾನ ಯಾವುದು ಎನ್ನುವ ಕುರಿತು ಇಡೀ ಜಗತ್ತೇ ತಲೆ ಕೆಡಿಸಿಕೊಂಡಿತ್ತು. ಅನೇಕ ತಜ್ಞರು ಕೊರೋನಾ ವೈರಸ್‌ ಮೊದಲಿಗೆ ಚೀನಾದ ವುಹಾನ್ ಮಾಂಸ ಮಾರುಕಟ್ಟೆಯಲ್ಲಿ ಪತ್ತೆಯಾಯಿತು ಎಂದು ನಂಬಿದ್ದರು. ಆದರೆ ಕೆಲ ವರದಿಗಳ ಬಳಿಕ ವೈರಸ್ ಉಗಮ ಸ್ಥಾನ ವುಹಾನ್​ನ ಒಂದು ಸಂಶೋಧನಾ ಲ್ಯಾಬ್ ಎಂದು ಹೇಳಲಾಯಿತು.

ಬೋಸ್ಟನ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ತಂಡವೊಂದು 80% ರಷ್ಟು ಮರಣ ಪ್ರಮಾಣವನ್ನು ಹೊಂದಿರುವ ಕೋವಿಡ್ ಸ್ಟ್ರೈನ್ (‌ ವೈರಸ್‌ ರೂಪಾಂತರ) ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ವೈರಸ್‌ ಅನ್ನು ಪ್ರಸ್ತುತ ಓಮಿಕ್ರಾನ್‌ ಮತ್ತು ಚೀನಾದ ವುಹಾನ್‌ನಲ್ಲಿ ಸೃಷ್ಟಿಯಾದ ಎರಡನೇ ವೈರಸ್‌ಗಳನ್ನು ಸಂಯೋಜನೆ ಮಾಡಿ ಈ ರೂಪಾಂತರವನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಮೂಲ ವೈರಸ್‌ಗಿಂತ ವಿಭಿನ್ನವಾಗಿ ವರ್ತಿಸುತ್ತದೆ ಎನ್ನಲಾಗಿದೆ.

ವಿಜ್ಞಾನಿಗಳ ಈ ಸಂಶೋಧನೆ ಸುಮಾರು 80 ಪ್ರತಿಶತ ಇಲಿಗಳ ಮರಣಕ್ಕೆ ಕಾರಣವಾಗಿದೆ ಎಂದು ಡೈಲಿ ಮೇಲ್‌ ವರದಿ ಮಾಡಿದೆ. ಇದರ ಮಧ್ಯೆ ಆರೋಗ್ಯ ತಜ್ಞರು ಗಂಭೀರ ಅಪಾಯ ಎಂದು ವಿಜ್ಞಾನಿಗಳ ವಿರುದ್ಧ ಧ್ವನಿ ಎತ್ತಿದ್ದಾರೆ.

Leave a Comment

Your email address will not be published. Required fields are marked *