Ad Widget .

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಾರು ತಡೆದ ಪ್ರಕರಣ| ಸರ್ಕಾರದಿಂದ ಸಿಐಡಿ ತನಿಖೆಗೆ ಆದೇಶ

ಸಮಗ್ರ ನ್ಯೂಸ್: ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಅವರ ಕಾರನ್ನು ಬೆನ್ನತ್ತಿ ಅಡ್ಡಗಟ್ಟಿ ಮಾರಕಾಯುಧ ತೋರಿಸಿ ಬೆದರಿಕೆಯೊಡ್ಡಿರುವ ಪ್ರಕರಣವನ್ನು ಸರಕಾರ ಸಿಐಡಿ ತನಿಖೆಗೆ ಒಪ್ಪಿಸಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಪ್ರಸ್ತುತ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ ದೂರನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.

Ad Widget . Ad Widget . Ad Widget .

ಪ್ರಸ್ತುತ ತನಿಖಾಧಿಕಾರಿಯಲ್ಲಿರುವ ದಾಖಲೆಗಳನ್ನು ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಸಿಐಡಿ ತನಿಖಾ ಕಚೇರಿಗೆ ಹಸ್ತಾಂತರಿಸಬೇಕು ಎಂದು ರಾಜ್ಯ ಡಿಜಿಪಿಯವರ ಪರವಾಗಿ ಆರ್‌. ಹಿತೇಂದ್ರ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಹರೀಶ್‌ ಪೂಂಜಾ ಅವರು ಅ. 13ರಂದು ರಾತ್ರಿ ಬೆಂಗಳೂರಿನಿಂದ ಮಂಗಳೂರಿಗೆ ವಿಮಾನದ ಮೂಲಕ ಬಂದು ಬೆಳ್ತಂಗಡಿಗೆ ಕಾರಿನಲ್ಲಿ ತೆರಳುವ ವೇಳೆ 11.15ರ ಸಮಯ ಅವರ ಕಾರನ್ನು ದುಷ್ಕರ್ಮಿಗಳು ಫರಂಗಿಪೇಟೆ ಬಳಿ ಅಡ್ಡಹಾಕಿ ನಿಂದಿಸಿದ್ದರು. ಅಲ್ಲದೆ ಆರೋಪಿ ಮಾರಕಾಸ್ತ್ರ ತೋರಿಸಿ ಜೀವ ಬೆದರಿಕೆಯೊಡ್ಡಿದ್ದ ಎಂದು ಆರೋಪಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಫಳ್ನೀರಿನ ರಿಯಾಜ್‌ನನ್ನು ಬಂಧಿಸಿದ್ದು, ಆತನ ಬಳಿ ಸ್ಪಾನರ್ ಮಾತ್ರವೇ ಪತ್ತೆಯಾಗಿತ್ತು. ಘಟನೆ ಬಳಿಕ ಆತ ಜಾಮೀನು ಮೂಲಕ ಹೊರಬಂದಿದ್ದು, ಇದೀಗ ಸಿಐಡಿ ನಿಂದ ಮರುತನಿಖೆ ಆರಂಭವಾಗಿದೆ

Leave a Comment

Your email address will not be published. Required fields are marked *