ವಾಟ್ಸಾಪ್ ನಲ್ಲೂ ಬರಲಿದೆ ಎಡಿಟ್ ಆಪ್ಷನ್

ಸಮಗ್ರ ಡಿಜಿಟಲ್ ಡೆಸ್ಕ್: ವಾಟ್ಸ್‌ ಆ್ಯಪ್‌ನಲ್ಲಿ ಹೊಸ ಅಪ್‌ಡೇಟ್‌ ಬರಲು ಸಿದ್ಧವಾಗಿದೆ. ಈ ಅಪ್‌ಡೇಟ್‌ನಲ್ಲಿ ನೀವು ಕಳುಹಿಸಿದ ಸಂದೇಶವನ್ನು ಎಡಿಟ್‌ ಮಾಡುವುದಕ್ಕೆ ಆಯ್ಕೆಯಿರಲಿದೆ. ಟ್ವಿಟರ್‌ ಮೂರು ದೇಶಗಳಲ್ಲಿ ಈ ಸೌಲಭ್ಯವನ್ನು ಪರಿಚಯಿಸಿರುವ ಬೆನ್ನಲ್ಲೇ ವಾಟ್ಸ್‌ಆ್ಯಪ್‌ ಕೂಡ ಇಂತಹ ಸೌಲಭ್ಯ ನೀಡಲು ಮುಂದಾಗಿದೆ.

Ad Widget ... ..

ಯಾವುದೇ ಸಂದೇಶವನ್ನು ಕಳುಹಿಸಿ 15 ನಿಮಿಷಗಳೊಳಗೆ ಅದನ್ನು ಎಡಿಟ್‌ ಮಾಡಬಹುದು. ಎಡಿಟ್‌ ಮಾಡಿದಂತಹ ಸಂದೇಶದ ಟಿಕ್‌ ಮಾರ್ಕ್‌ ಪಕ್ಕದಲ್ಲಿ “edited’ ಎಂದು ನಮೂದಾಗುತ್ತದೆ.

Ad Widget

ಈ ಅಪ್‌ಡೇಟ್‌ ಸದ್ಯ ಅಭಿವೃದ್ಧಿ ಹಂತದಲ್ಲಿದ್ದು, ಶೀಘ್ರವೇ ಮೊಬೈಲ್‌ಗ‌ಳಿಗೆ ಬರಲಿದೆ ಎಂದು WabetaInfo ಸಂಸ್ಥೆ ವರದಿ ಮಾಡಿದೆ. ವಾಟ್ಸ್‌ಆ್ಯಪ್‌ ಇತ್ತೀಚೆಗಷ್ಟೇ ಗುಂಪುಗಳ ಸದಸ್ಯರ ಗರಿಷ್ಠ ಮಟ್ಟವನ್ನು ದುಪ್ಪಟ್ಟು ಮಾಡಿದೆ.

Leave a Comment

Your email address will not be published. Required fields are marked *