ನಿದ್ರಾಜನಕ ಸಿರಪ್ ಮಾರಾಟ; ವ್ಯಕ್ತಿ‌ ಅಂದರ್

ಸಮಗ್ರ ನ್ಯೂಸ್: ಬೆಂಗಳೂರಿನ ಆಕ್ಸ್​ಫರ್ಡ್​ ಮೈದಾನದ ಬಳಿ ಅನಧಿಕೃತವಾಗಿ ನಿದ್ರಾಜನಕ ಸಿರಪ್ ಮಾರುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಮಾನುಲ್ಲಾ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

Ad Widget ... ..

ಆರೋಪಿಯು, ಜೆ.ಪಿ.ನಗರ 1ನೇ ಹಂತ,ಆಕ್ಸ್‌ಫರ್ಡ್ ಮೈದಾನದ ಬಳಿ ಸಾಗಾಟ ಮಾಡಿಕೊಂಡು ಬಂದು ಅನಧಿಕೃತವಾಗಿ ದ್ವಿಚಕ್ರ ವಾಹನದಲ್ಲಿ ಬಂದು ನಿದ್ರಾಜನಕ ಸಿರಪ್ ಮಾರಾಟ ಮಾಡುತ್ತಿದ್ದ. ಈ ಸಂಬಂಧ ಖಚಿತ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Ad Widget

ಬಂಧಿತ ಆರೋಪಿ ಅಮಾನುಲ್ಲಾನಿಂದ 356 ESkuf ಸಿರಪ್ ಬಾಟಲಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಅಲ್ಲದೇ ಆರೋಪಿ ವಿರುದ್ಧ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *