ಎದೆನೋವು, ಉಸಿರಾಟ ಸಮಸ್ಯೆಂದು ಆಸ್ಪತ್ರೆ ತೆರಳಿದ ವ್ಯಕ್ತಿಯ ಶ್ವಾಸಕೋಶದಲ್ಲಿ ಮೂಗುತಿ ಪತ್ತೆ

ಸಮಗ್ರ ನ್ಯೂಸ್ : ಅಮೆರಿಕಾ ಮೂಲದ ವ್ಯಕ್ತಿಯೊಬ್ಬರು ಉಸಿರಾಟದ ತೊಂದರೆ ಹಾಗೂ ಎದೆನೋವಿನಿಂದ ಬಳಲುತ್ತಿದ್ದ ಕಾರಣ ಆಸ್ಪತ್ರೆಗೆ ತೆರಳಿದಾಗ ಅವರಿಗೆ ಅಚ್ಚರಿ ಕಾದಿತ್ತು.

Ad Widget ... ..

ಮೂಗುತಿ ಸುಮಾರು ಐದು ವರ್ಷಗಳ ಹಿಂದೆ ಕಳೆದು ಹೋಗಿದ್ದು, ಇದೀಗ ಅವರ ಶ್ವಾಸಕೋಶದಲ್ಲಿ ಪತ್ತೆಯಾಗಿದೆ.

Ad Widget

ಅಮೆರಿಕ ಮೂಲದ ಜಾಯ್ ಲಿಕಿನ್ಸ್ ಎಂಬವರು ರಾತ್ರಿ ವೆಳೆ ಮಲಗಿದ್ದ ವೇಳೆ ಉಸಿರಾಟದ ತೊಂದರೆ, ಎದೆನೋವು ಕಾಣಿಸಿಕೊಂಡಿದೆ.

ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ಪರೀಕ್ಷೆ ಮಾಡಿ ನ್ಯೂಮೋನಿಯಾ ಲಕ್ಷಣಗಳಿರಬಹುದು ಎಂದು ತಿಳಿಸಿದರು.

ಆದರೆ ಎಕ್ಸ್‌-ರೇ ತೆಗೆದು ನೋಡಿದಾಗ ಶ್ವಾಸಕೋಶದಲ್ಲಿ 0.6 ಇಂಚಿನ ಮೂಗುತಿ ಇರುವುದು ಪತ್ತೆಯಾಗಿದೆ.

ಉಸಿರಾಟದ ತೊಂದರೆ ಉಂಟಾಗಿದ್ದು, ಆಸ್ಪತ್ರೆಯಲ್ಲಿ ಎಕ್ಸ್‌-ರೇ ತೆಗೆಯುವ ವೇಳೆ ಪತ್ತೆಯಾಗಿದೆ ಎಂದು ಜಾಯ್‌ ತಿಳಿಸಿದ್ದಾರೆ.

ಯಾವುದೇ ಅಪಾಯ ಸಂಭವಿಸಲಿಲ್ಲ, ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ ಹೊರ ತೆಗೆದಿದ್ದಾರೆ.

Leave a Comment

Your email address will not be published. Required fields are marked *