Ad Widget .

ಕೋತಿಗಳ ಕಾಟಕ್ಕೆ ಸಿಲುಕಿದ ಪೊಲೀಸರು/ ಮಧ್ಯೆ ಎಂಟ್ರಿ ಕೊಟ್ಟ ಹಾವು/ ಮುಂದೇನಾಯ್ತು ನೀವೇ ನೋಡಿ

ತಿರುವನಂತಪುರಂ: ಸಮಾಜದಲ್ಲಿ ಶಾಂತಿ ಭದ್ರತೆಯನ್ನು ಕಾಪಾಡುವ ಪೊಲೀಸರನ್ನು ಕೋತಿಗಳಿಂದ ಕಾಪಾಡುವವರೇ ಇರಲಿಲ್ಲ. ಇಲ್ಲಿ ನಡೆದಿರೋದು ತಮಿಳುನಾಡಿನ ಗಡಿಗೆ ಹೊಂದಿಕೊಂಡಿರುವ ಕೇರಳ ಅರಣ್ಯ ಪ್ರದೇಶದ ಕುಂಬುಮೆಟ್ಟು ಪೊಲೀಸ್​ ಠಾಣೆಯಯಲ್ಲಿ. ಕೋತಿಗಳ ಗುಂಪು ಏಕಾಏಕಿ ದಾಳಿ ಮಾಡಿ ನಾನಾ ಹಂಗಾಮಾ ಮಾಡೋದು ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಇಂತಹ ಸಂದರ್ಭದಲ್ಲಿ ಪೊಲೀಸರಿಗೆ ಸ್ಥಳೀಯ ರೈತರೊಬ್ಬರು ನೀಡಿದ್ದ ಸಲಹೆ ಸದ್ಯ ವರ್ಕ್​ ಆಗಿದ್ದು, ಪೊಲೀಸರ ಸಮಸ್ಯೆಗೆ ಪರಿಹಾರ ಲಭ್ಯವಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕೇರಳದ ಇಡುಕಿಯಲ್ಲಿರುವ ಕುಂಬುಮೆಟ್ಟು ಪೊಲೀಸ್​​ ಠಾಣೆಯ ಬಳಿ ಅತೀ ಹೆಚ್ಚು ಕೋತಿಗಳ ಕಾಟವಿದ್ದು. ಈ ಕೋತಿಗಳ ಕಾಟದಿಂದ ತಪ್ಪಿಸಿಕೊಳ್ಳಲು ರಬ್ಬರ್ ನಿಂದ ತಯಾರಿಸಿದ ಹಾವನ್ನೇ ರಕ್ಷಣ ಕವಚವನ್ನಾಗಿ ಮಾಡಿದ್ದಾರೆ. ನಿಜವಾದ ಹಾವಲ್ಲ, ಬದಲಿಗೆ ಪ್ಲಾಸಿಕ್ಟ್​ ಹಾವುಗಳನ್ನು ಪೊಲೀಸ್ ಠಾಣೆಯ ಸುತ್ತಲ ಮರಕ್ಕೆ ನೆತ್ತು ಹಾಕಿ ಪ್ರಯೋಗ ಮಾಡಿದ್ದಾರೆ.

Ad Widget . Ad Widget . Ad Widget .

ಈ ಕುರಿತು ಮಾತನಾಡಿದ ಸಬ್​​ ​​ಇನ್ಸ್​​ಪೆಕ್ಟರ್​​​​ ಪಿ.ಕೆ.ಲಾಲಭಾಯಿ ಅವರು, ಬಹಳ ವರ್ಷಗಳಿಂದ ಪೊಲೀಸರಿಗೆ ಕಾಡುತ್ತಿದ್ದ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ರಬ್ಬರ್ ಹಾವುಗಳನ್ನು ನೋಡಿದ ನಂತರ ಕೋತಿಗಳು ಬರೋ ಧೈರ್ಯ ಮಾಡುತ್ತಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ರಬ್ಬರ್ ಹಾವುಗಳನ್ನು ಕಟ್ಟಿದರೆ ಮಂಗಗಳ ಕಾಟ ಇಲ್ಲ. ಹೀಗಾಗಿ ಈ ರೀತಿಯ ಪ್ರಯೋಗವನ್ನು ಮಾಡಿದ್ದೇವೆ ಎಂದು ಹೇಳಿದ್ದಾರೆ. ಈ ಪ್ರಯೋಗವನ್ನು ಪೊಲೀಸರಿಗೆ ಹೇಳಿಕೊಟ್ಟ ರೈತ ಮಾತನಾಡಿ, ನನ್ನ ಜಮೀನಿನಲ್ಲೂ ಕಾಡು ಪ್ರಾಣಿಗಳು, ಕೋತಿಗಳು ಸಾಕಷ್ಟು ಸಮಸ್ಯೆ ಮಾಡುತ್ತಿದ್ದವು. ಈ ಪ್ರಯೋಗ ಯಶಸ್ವಿಯಾಗಿದ್ದ ಕಾರಣ ಇದನ್ನೇ ಪೊಲೀಸರಿಗೆ ಹೇಳಿದ್ದೆ ಎಂದು ತಿಳಿಸಿದ್ದಾರೆ.

Leave a Comment

Your email address will not be published. Required fields are marked *