ಅಥಣಿ : ಅಥಣಿ ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ ಮೇಲಾಧಿಕಾರಿ, ಲೈನ್ ಮನ್ ಕಿರುಕುಳಕ್ಕೆ ಬೇಸತ್ತು ಓರ್ವ ಕಾರ್ಮಿಕ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇದೀಗ ಹೊಸತಿರುವು ಪಡೆದುಕೊಂಡಿದೆ.
ಕಳೆದ ಸೋಮವಾರ ಮಂಜುನಾಥ ಗಂಗಾಧರ ಮುತ್ತಗಿ ಆತ್ಮಹತ್ಯೆ ಮಾಡಿಕೊಂಡಿರುವ ಹೆಸ್ಕಾಂ ಗುತ್ತಿಗೆ ಕಾರ್ಮಿಕ. ಮೂಲತಃ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದ ನಿವಾಸಿಯಾಗಿದ್ದು. ಸಧ್ಯ ಅಥಣಿ ಹೆಸ್ಕಾಂ ಕಚೇರಿಯಲ್ಲಿ 07 ವರ್ಷದಿಂದ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ.
ಘಟನೆ ಸ್ಥಳಕ್ಕೆ ಅಥಣಿ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಆತ್ಮಹತ್ಯೆ ಮಾಡಿಕೊಂಡಿರುವ ಮಂಜುನಾಥ ಮುತ್ತಗಿ ಪತ್ನಿ ಲಕ್ಷ್ಮೀ ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನನ್ನ ಪತಿಯ ಸಾವಿಗೆ ಅಥಣಿ ಹೆಸ್ಕಾಂ ಅಧಿಕಾರಿ ನಜೀರ್ ಡಾಲಾಯತ್, ಲೈನ್‍ಮ್ಯಾನ್ ಬಸವರಾಜ್ ಸದಾಶಿವ ಕುಂಬಾರ ಕಾರಣ ಎಂದು ಆರೋಪಿಸಿದ್ದಾರೆ.
ನನ್ನ ಪತಿಗೆ ಭೇದಭಾವ, ಮಾನಸಿಕ ಹಿಂಸೆ ಮತ್ತು ಕಿರುಕುಳ ನೀಡುತ್ತಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಅಥಣಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ