ಸಮಗ್ರ ನ್ಯೂಸ್: ಮಕ್ಕಳಿಗೆ ತಿದ್ದಿ ಬುದ್ದಿ ಹೇಳುವ ಶಿಕ್ಷಕರೇ ಈಗ ವಿಕೃತಿ ಮನಸ್ಥಿತಿಯಿಂದ ಮೆರೆಯುತ್ತಿದ್ದಾರೆ. ಇಂತಹ ಮತ್ತೊಂದು ವಿಲಕ್ಷಣ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಶಾಲೆಯ ಶಿಕ್ಷಕರೊಬ್ಬರು ಶಾಲಾ ಸಮವವಸ್ತ್ರದಲ್ಲೇ ಮಗು ಮಲ ವಿಸರ್ಜನೆ ಮಾಡಿದ್ದಕ್ಕೆ ಆಕೆಯ ಮೇಲೆ ಬಿಸಿ ನೀರು ಎರಚಿ ವಿಕೃತಿ ಮೆರೆದಿದ್ದಾರೆ.
ರಾಯಚೂರು ಜಿಲ್ಲೆಯ ಸಂತೆಕೆಲ್ಲೂರು ಗ್ರಾಮದಲ್ಲಿ ಶಾಲಾ ಸಮವವಸ್ತ್ರದಲ್ಲೇ ಮಗು ಮಲ ವಿಸರ್ಜನೆ ಮಾಡಿಕೊಂಡಿದ್ದರು. ಈ ವೇಳೆ ಶಿಕ್ಷಿಕ ಹುಲಿಗೆಪ್ಪ ವಿದ್ಯಾರ್ಥಿನಿ ಮೇಲೆ ಬಿಸಿ ನೀರು ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ೨ನೇ ತರಗತಿಯಲ್ಲಿದ್ದ ಅಖಿತ್ ಗೆ ಬಿಸಿ ನೀರು ಸುರಿದ್ದಿದ್ದಾರೆ. ಈ ಘಟನೆಯಿಂದ ಶೇ. 40ರಷ್ಟು ಮಗುವಿನ ದೇಹ ಸುಟ್ಟು ಹೋಗಿದೆ. ಕೂಡಲೇ ದೂರು ನೀಡಿದ್ದರೂ ಪೊಲೀಸರು ಮಾತ್ರ ಕ್ರಮ ವಹಿಸಲು ಹಿಂದೇಟು ಹಾಕಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ






