ಈ ಶತಕವನ್ನ ಪತ್ನಿ ಅನುಷ್ಕಾಗೆ ಅರ್ಪಿಸುವೆ/ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಆಕೆ ನನ್ನ ಜೊತೆಗಿದ್ದಾಳೆ : ಕಿಂಗ್ ಕೊಹ್ಲಿ

Ad Widget ... ..

ಕ್ರೀಡೆ ನ್ಯೂಸ್: ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಅಪ್ಘಾನಿಸ್ತಾನದ ವಿರುದ್ಧ ಸೆ.8ರಂದು ನಡೆದ ಏಷ್ಯಾಕಪ್ ಅಂತಿಮ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಬಳಿಕ ಭಾವುಕರಾಗಿ ಮಾತನಾಡಿದ ವಿರಾಟ್ ಕೊಹ್ಲಿ, ಈ ಶತಕವನ್ನು ನನ್ನ ಪತ್ನಿ ಅನುಷ್ಕಾಹಾಗೂ ಪುತ್ರಿ ವಾಮಿಕಾಗೆ ಅರ್ಪಿಸುವೆ ಎಂದು ನುಡಿದಿದ್ದಾರೆ.

Ad Widget

ಕ್ರಿಕೆಟ್ ಕಳೆದ ಎರಡೂವರೆ ವರ್ಷ ನನಗೆ ಹಲವು ಪಾಠಗಳನ್ನು ಕಲಿಸಿದೆ. ಟಿ20ಯಲ್ಲಿ ನನ್ನ ಶತಕದ ಬರ ನೀಗಲಿದೆ ಎಂದು ಭಾವಿಸಿರಲಿಲ್ಲ. ಕಠಿಣ ಸಮಯದಲ್ಲೂ ನನ್ನೊಂದಿಗೆ ನನ್ನ ತಂಡ ಸಹಕಾರಿಯಾಗಿ ನಿಂತಿದೆ. ಶತಕ ಬಾರಿಸುತ್ತಿಲ್ಲ ಎನ್ನುವ ಬಗ್ಗೆ ಹೊರಗೆ ಸಾಕಷ್ಟು ಚರ್ಚೆಯಾಗುತ್ತಿತ್ತು ಎಂದು ನನಗೆ ಗೊತ್ತು. ನಾನಿಲ್ಲಿ ಇಂದು ನಿಂತಿದ್ದೇನೆ ಎಂದರೆ ಅದಕ್ಕೆ ಒಬ್ಬ ವ್ಯಕ್ತಿ ಪ್ರಮುಖ ಕಾರಣ. ಅದು ನನ್ನ ಪತ್ನಿ ಅನುಷ್ಕಾ. ಈ ಶತಕ ಆಕೆ ಹಾಗೂ ನಮ್ಮ ಪುತ್ರಿ ವಾಮಿಕಾಗೆ ಅರ್ಪಿಸುತ್ತೇನೆ. ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಅನುಷ್ಕಾ ನನ್ನ ಜೊತೆಗಿದ್ದಾಳೆ. ಆಕೆಯಿಂದ ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ ಎಂದು ಕೊಹ್ಲಿ ಭಾವುಕರಾಗಿದ್ದಾರೆ.

Leave a Comment

Your email address will not be published. Required fields are marked *